airmail

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 5 – ಅಮೆರಿಕಾದ ಪಾರಿವಾಳದ ಸಂದೇಶ

ಅಮೆರಿಕಾದ ಪಾರಿವಾಳದ ಸಂದೇಶ

ಹೆಸರಿನ ಹುಡುಕಾಟ…

ಅಮ್ಮ, ಚಿಕ್ಕಿ, ತಂಗಿ ಎಲ್ಲರ ತಲೆ ತಿಂದರೂ ಆ ಒಂದು ಪತ್ರದ ಹೆಸರೇನೆಂದು ಸರಿಯಾಗಿ ಗೊತ್ತಾಗಲಿಲ್ಲ. ಅದು ಆಂಗ್ಲ ಭಾಷೆಯಲ್ಲಿ ‘ಏರ್ ಮೇಲ್ ‘ಎಂದೂ, ಹಿಂದಿಯಲ್ಲಿ ‘ಹವಾಯ್ ಪತ್ರ್’ ಎಂದೂ ಕರೆಯಲ್ಪಡುವುದೆಂದು ಗೂಗಲ್ ಮಹಾಶಯ ಎಷ್ಟು ಹೇಳಿದರೂ, ಅದು ನಾನಂದು ಆ ಪತ್ರ ಪೋಸ್ಟ್ ಆಫೀಸಿನಿಂದ ಹಾಗೆ ಹೇಳಿ …

seebe

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 4 – ಪೇರಳೆ

ನಿಮಗೆ ಪೇರಳೆ ಗೊತ್ತುಂಟಾ? ನೀವು ದಕ್ಷಿಣ ಕನ್ನಡದವರಾದರೆ ಗೊತ್ತಿರುತ್ತದೆ. ಹಾಗೆಯೇ ಅಲ್ಲಿಯವರಿಗೆ ೨ ರೀತಿಯ ಪೇರಳೆ ಗೊತ್ತಿರುತ್ತದೆ. ನನಗೆ ಅದು ಬಾಲ್ಯದ ಮಜದ ನೆನಪೂ ಸಹ ಹೌದು! ಗೊತ್ತಾಗದಿದ್ದರೆ ಮುಂದೆ ಓದಿ!

ಪೇರಳೆ ಅಂತ ನಾವು ಹೇಳುವುದು ಹೆಚ್ಚಾಗಿ ಸೀಬೆ ಹಣ್ಣಿಗೆ. ನಮ್ಮೂರಲ್ಲಿ ಎಲ್ಲರೂ ಸೀಬೆ ಕಾಯಿ / ಹಣ್ಣನ್ನು ಪೇರಳೆ ಎಂದೇ ಹೇಳುವುದು. ಪೇರಳೆಗೆ …

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 3

ಆಲೂಗಡ್ಡೆಯ ಸುತ್ತ…! 

ಮೊನ್ನೆ ಚೆನ್ನಾಗಿರುವ ಆಲೂಗಡ್ಡೆ ಆರಿಸಿ ತರಲು ಪಟ್ಟ ಅವಸ್ಥೆಯಲ್ಲಿ ಮತ್ತೆ ನಮ್ಮ ಮನೆಯ ಆಲೂಗಡ್ಡೆ ಸಾಂಬಾರ್ ನೆನಪಿಗೆ ಬಂತು. ಆಗೆಲ್ಲ ಮನೆಯಲ್ಲೇ ಬೆಳೆದ ತರಕಾರಿಗಳ ಅಡುಗೆಯದೇ ಕಾರುಬಾರು. ರುಚಿಯಾದ ಹೀರೆ, ಪಟಗಿಲ, ಬೆಂಡೆ, ತೊಂಡೆ, ಹಾಗಲ, ಹರಿವೆ, ಬಸಳೆ.. ಹೀಗೆ ಉದ್ದದ ಪಟ್ಟಿ ನೆನೆಸಿಕೊಂಡರೆ ಬಾಯಲ್ಲಿ ಈಗಲೂ ನೀರು ಬರುತ್ತದೆ!  ಆಗಿನ ರುಚಿ, …

tiruguva khurchi

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 2

ಅಣ್ಣ – ತಂಗಿ ಮತ್ತು ತಿರುಗುವ ಖುರ್ಚಿಯಲ್ಲಿನ ಸಾಮಾನ್ಯ ಜ್ಞಾನ !

ಅದೊಂದು ಭಾನುವಾರ. ಎಂದಿನಂತೆ ಸುಮಾರು 10:30 ರ ಅಂದಾಜು. ಅಜ್ಜ ಚಹಾ ಕುಡಿದು; ಸ್ಕೂಟರ್ ಹಿಡಿದು ಪೇಟೆಗೆ ಹೊರಡುತ್ತಲೇ ನನ್ನ ಸವಾರಿ ನಿಧಾನಕೆ ಅಜ್ಜನ ಓದಿನ ಕೋಣೆಗೆ ಹೊಕ್ಕಿತ್ತು. ಅಜ್ಜ ಇದ್ದಾಗ ಹೋಗುವುದು ಬೇರೆಯದೇ ಇತ್ತು. ಆದರೆ, ಅಜ್ಜ ಇಲ್ಲದಾಗ ಹೋಗಿ ಅಜ್ಜನ …

dolls

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 3 – ತಂಗಿಯ ಗೊಂಬೆ

“ಅಮ್ಮಾ .. ಎಂತ.. ಚಿಕ್ಕಿಯ ಲೆಟರ್ ಬಂತಾ? ಯಾವಾಗ ಬರುತ್ತಾರಂತೆ?”, ನಾನು ಕೇಳಿದ್ದೇ ತಡ ಬೆಕ್ಕುಗಳೊಂದಿಗೆ ಆಡುತ್ತಲಿದ್ದ ತಂಗಿಯ ಕಿವಿ ನಿಮಿರಿ ನಿಂತಿತ್ತು ಮುಂದಿನ ಮಾತುಗಳಿಗೆ.

“ಹಾಂ  .. ಸರಿಯಾಗಿ ಗೊತ್ತಿಲ್ಲ. ಮೊನ್ನೆ ಅಜ್ಜನಿಗೆ ಕರೆ ಮಾಡಿದ್ದಾಗ ನಾಡಿದ್ದು ಆಗಸ್ಟಿನಲ್ಲಿ ಬರಬಹುದೇನೋ ಎಂದಿರಬೇಕು..”.

“ಹಾ.. ಇನ್ನು ೨ ತಿಂಗಳುಗಳು ಮಾತ್ರ ಬಾಕಿ.. ಒಳ್ಳೆದಾಯ್ತು.. ಈಗ ತಂಗಿ …

jackfruit-palya

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 2 – ಅಜ್ಜಿಯ ಕೈಚಳಕ – ನಳಪಾಕ 

ನೆನಪಿನ ಬುತ್ತಿ

ಮೊನ್ನೆ ಸಂಜೆ ಜೋರಾಗಿ ಮಳೆ ಬರುತ್ತಿತ್ತು. ಆಗ ಮತ್ತೆ ನೆನಪಾಯಿತು ನೋಡಿ, ಅಜ್ಜಿಯ ನಳಪಾಕಗಳು! ಅದರ ರುಚಿ ಅದನ್ನು ಸವಿದವಿರಿಗೇ ಗೊತ್ತು! ಬೇಸಿಗೆ ರಜೆ ಸಾಧಾರಣ ಮೇ ತಿಂಗಳಿನಲ್ಲಿ ಮುಗಿಯುತ್ತ ಬಂದರೂ ನಾವಿನ್ನೂ ಅಜ್ಜಿಮನೆಯಲ್ಲೇ ಠಿಕಾಣಿ ಹೂಡಿರುತ್ತಿದ್ದೆವು ಕೆಲವೊಮ್ಮೆ! ಹಾಗೆಯೆ ಮಾನ್ಸೂನಿನ ಮುನ್ಸೂಚನೆಯಂತೆ ಜೋರಾಗಿ ಮಳೆ ಬರುವಾಗ ಸಾಯಂಕಾಲಕ್ಕೆ ಅಜ್ಜಿ ಮಾಡುವ ಹಲಸಿನ …