ಸಂಗಾತಿ

ಬಾಳ ಪಯಣದಿ ಜೊತೆಯಾದ ಜೊತೆಗಾರ
ನಡು ನಿಲ್ದಾಣದಿ ಸೇರಿಕೊಂಡ ಸಹಪ್ರಯಾಣಿಕ
ಮುದದಿ ಕತ್ತಲಡಗಿಸಿ ಬೆಳಕ ಬೀರುವ ನೇಸರ
ನಭದಿ  ತಾರೆಗಳ ಮಧ್ಯೆ ಬಂದು ನಿಂತ ಚಂದ್ರಿಕ.

ಎಲ್ಲೂ ಸಲ್ಲದ ಮೇಲೆ, ಇಲ್ಲದ ನೆಪಗಳಾಚೆಗೆ
ಮೊಗದಿ ಮೇಳೈಸಿದ ಕಳೆಯು ಮಾರ್ದನಿಸಿ ಬತ್ತಿ
ಅಡಿಗಡಿಗೆ ತಲ್ಲಣದಿ ತುರುಬು ಕಟ್ಟಿದ ಪರಿಗೆ
ಪ್ರತಿ ಇಂಚಿಂಚೂ ಹೆಕ್ಕಿ ತೆಗೆದು ನೆನಪಿನ ಬುತ್ತಿ …

ಪ್ರತಿಬಿಂಬ

ಮನದ ಭಾವನೆಗಳ ಬದಲಾಯಿಸಿಕೊಂಡರೂ 
ಮುಖದ ಭಾವಗಳು ಬದಲಾದಾವೇ…?
ಭಾವನೆಗಳ ಭಾರಕ್ಕೆ ನಲುಗಿಹೋಗಿವೆ ಭಾವಗಳು
ಬರಿದಾಗಿವೆ ಬಣ್ಣ ತುಂಬಬೇಕಾದ ಚಿತ್ತಾರಗಳು!

ನೀಲ ಗಗನದಿ ತುಂಬಿವೆ ಕಗ್ಗತ್ತಲ ಕಾರ್ಮೋಡಗಳು 
ಬಾನಂಗಳದಿ ಕಳೆದು ಹೋಗಿವೆ ನಕ್ಷತ್ರಗಳು!
ಮುಂಗಾರಿನ ಆಗಮನದ ನೀರೀಕ್ಷೆಯಲಿವೆ ಬಾನಾಡಿಗಳು
ಭೋರ್ಗರೆಯುತ ಮಿಡಿಯುತಲಿವೆ ಸಮುದ್ರದಲೆಗಳು!

ನದಿಯ ತಿಳಿನೀರದೀಗ ತೋರಿದೆ ಆಗಸದ ನಿಜ ಬಿಂಬ 
ಸಪ್ತಸಾಗರದಲೆಗಳವು ಮರೆಮಾಚಿವೆಯಾ ಪ್ರತಿಬಿಂಬ!
ಮನವ …