ಕನ್ನಡಿ
ದಟ್ಟವಾದ ಕಪ್ಪು ಕಾಡಿಗೆಯದು
ಶತಪ್ರಯತ್ನ ಮಾಡುತಲಿಹುದು
ಕಂಡರೂ ಕಾಣದಂತಿಹ ಅಶ್ರುಗಳ
ಆ ಕಣ್ರೆಪ್ಪೆಗಳಡಿ ಮರೆಮಾಚಿಡಲು
ಗಾಢ ಬಣ್ಣ ಮೆತ್ತಿದ ತುಟಿಯಂಚಿನಲಿ
ಅವಿತಿಹುದು ನೋವಿನ ಛಾಯೆ
ಕೆಂಪು ಅಧರದಿ ಮೂಡಿಹ ಶುಷ್ಕ ನಗು
ಮಾಸಿಹುದು ಅಗಾಧ ವಿಷಾದವನು
ಮೊಗದ ತುಂಬಾ ತುಂಬಿದೆ ಥಳುಕು –
ಬಳುಕಿನ ಕೃತಕ ಸೌಂದರ್ಯ ವರ್ಧಕ
ಮೂರ್ತವೆತ್ತ ಗಾಂಭೀರ್ಯ ಬೇಕೆಂದರೂ
ವಿಷದ ಪಡಿಸಲಾರದ …