mungarina-mounaraga

ಮುಂಗಾರಿನ ಮೌನರಾಗ – ಭಾಗ – 8

“ಈಗ ಹೇಳು, ಏನು ವಿಷಯಾಂತ? ಐಸ್ ಕ್ರೀಮ್ ತಿಂದದ್ದಾಯಿತಲ್ಲ?”, ಕೇಳಿದರು ಸುಮಂಗಲ.

“ಏನಿಲ್ಲ, ನಮ್ಮ ಆಫೀಸಿನಲ್ಲಿ ಡ್ರೆಸ್ ಕೋಡ್ ಡಿಸೈನ್ ಮಾಡಲು ಅವಕಾಶ ಸಿಕ್ಕಿತ್ತು. ನಾನು ಮಾಡಿದ್ದು ಆಯ್ಕೆಯಾಯಿತು ಕೊನೆಗೂ. ವೋಟಿಂಗ್ ಎಲ್ಲ ನಡೀತು. ಆದರೆ ನಿಜವಾಗಲೂ ಎಲ್ಲರಿಗೂ ನನ್ನ ಡಿಸೈನ್ ಈ ಮಾಡೆರ್ನ್ ಕಾಲದಲ್ಲಿ ಇಷ್ಟ ಆಗಿದ್ದು ಆಶ್ಚರ್ಯದ ಜೊತೆ, ಖುಷಿಯೂ ಆಯಿತು. ಅದಕ್ಕೆ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 7

ಮನೆಗೆ ಬಂದವಳೇ ಸಾರಿಕಾ ಎಲ್ಲರನ್ನೂ ಕರೆದು ಹೇಳಿದಳು, “ಬೇಗ ಬನ್ನಿ, ಐಸ್ ಕ್ರೀಮ್ ಕರಗಿಹೋಗುತ್ತದೆ. ಈಗಲೇ ತಿಂದರೆ ಅದರ ಮಜವೇ ಬೇರೆ. ಫ್ರಿಡ್ಜ್ನಲ್ಲಿ ಇಟ್ಟು ಮತ್ತೆ ತಿಂದರೆ ಇದಕ್ಕೆ ಆ ಸ್ವಾದವಿರುವುದಿಲ್ಲ. ಅಮ್ಮಾ .. ಎಲ್ಲಿದೀಯ? ಬೇಗ ಬಾ”.

ಹಿತ್ತಿಲ ಗಿಡದಲ್ಲಿ ಮಲ್ಲಿಗೆ ಕುಯ್ಯುತ್ತಿದ್ದ ಸುಮಂಗಲ ಕೈ ತೊಳೆದು, ಸೆರಗಿನಲ್ಲಿ ಕೈ ಒರೆಸಿಕೊಳ್ಳುತ್ತಾ ಗಡಿಬಿಡಿಯಲ್ಲಿ ಸಾರಿಕಾಳ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 5

ಅದೊಂದು ಭಾನುವಾರ ರಜತ್ ಬಹಳ ಖುಷಿಯಾಗಿದ್ದನು. ಬೆಳಗ್ಗೆ ಬೇಗನೆ ಎದ್ದು ಎಲ್ಲೋ ಹೊರಡಲು ತಯಾರಾಗಿದ್ದನ್ನು ಕಂಡು ರಮ ಕೇಳಿದರು, “ಏನೋ? ಭಾನುವಾರ ಇಷ್ಟು ಬೇಗ ಯಾವ ಕಡೆ ಹೊರಟೆ? ತಿಂಡಿ ಬೇಡವಾ?”.

“ಬೇಡಮ್ಮ. ಇವತ್ತು ತುಂಬಾ ಮುಖ್ಯವಾದ ಕೆಲಸವಿದೆ. ಆದಷ್ಟು ಬೇಗ ರಾಯಲ್ ಲಿಲಿಸ್ ಹೋಟೆಲಿಗೆ ಹೋಗಬೇಕು. ಕೆಲವೊಂದು ವ್ಯವಸ್ಥೆಗಳನ್ನು ನಾನೇ ಖುದ್ದು ನಿಂತು ನೋಡಿಕೊಳ್ಳಬೇಕು. …

mungarina-mounaraga

ಮುಂಗಾರಿನ ಮೌನರಾಗ – ಭಾಗ – 3

ಮನೆಗೆ ಬಂದವಳೇ ಸಾರಿಕಾ ತರಕಾರಿ ಚೀಲದಿಂದ ತರಕಾರಿಗಳನ್ನೆಲ್ಲ ತೆಗೆದು ತೊಳೆಯಲು ಒಂದು ಪಾತ್ರೆಯಲ್ಲಿ ಹಾಕಿದಳು. ನಂತರ ನೇರವಾಗಿ ಕೈ ಕಾಲು ಮುಖ ತೊಳೆದುಕೊಂಡು, ಬಟ್ಟೆ ಬದಲಿಸಿ, ತರಕಾರಿ ತೊಳೆಯುವುದರಲ್ಲಿ ನಿರತಳಾದಳು.

“ಇದೇನಿದು? ಒಳ್ಳೆ ನಾರ್ತ್ ಇಂಡಿಯನ್ಸ್ ತರಹ ಬರೀ ಈರುಳ್ಳಿ, ಆಲೂಗಡ್ಡೆ, ಟೊಮೇಟೊ, ಮೂಲಂಗಿ ಮತ್ತೆ ಬೆಂಡೆಕಾಯಿ ತಂದಿದೀಯ? ಕನಿಷ್ಠ ಪಕ್ಷ ಚೀನೀಕಾಯಿನೋ, ಅಥವಾ ಸೌತೇನೋ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 2

ಆಟೋದವನಿಗೆ ವಿಳಾಸ ಹೇಳಿ, ಸಾರಿಕಾ ಸಂದರ್ಶನದ ಸ್ಥಳ ತಲುಪಿದಾಗ ಅದಾಗಲೇ ಸಮಯ ೧೦ ಕಳೆದಿತ್ತು. ಸಂದರ್ಶನಕ್ಕೆ ರಿಪೋರ್ಟಿಂಗ್ ಟೈಮ್ ೯:೩೦ ಎಂದಿತ್ತು ಪತ್ರದಲ್ಲಿ. ಎಷ್ಟಾದರೂ ಇದು ಭಾರತ. ಇಲ್ಲಿ ಅದೂ – ಇದೂ ನೆಪ ಹೇಳಿಯಾದರೂ ಸಮಯಕ್ಕೆ ಸರಿಯಾಗಿ ತಲುಪದೇ ಇದ್ದರೂ ಮುಂದಿನದು ಹೇಗೋ ನಡೆಯುತ್ತದೆಂಬ ಭಂಡ ಧೈರ್ಯದಿಂದ, ಆಟೋ ಬಾಡಿಗೆ ಕೊಟ್ಟು ಕಳುಹಿಸಿ, ಆತ್ಮವಿಶ್ವಾಸದಿಂದ …

ಬಿಗುಮಾನದ ಭಾರ

ಭಾವಗಳ ಭಾರಕ್ಕೆ ಬೇರಾಗಿದೆ ಬಿಗುಮಾನ,
ಮನವ ಸಂತೈಸಬೇಕಿದೆ ನೀನೀ ದಿನ.
ಅರಸುತಿವೆ ಕಣ್ಗಳು ನಾ ಮೆಚ್ಚಿದ ಜೊತೆಗೆ,
ಬಯಸುತಿದೆ ಮನ ಬೆಚ್ಚನೆಯ ಅಪ್ಪುಗೆ.

ದೂರದ ತೀರದಲ್ಲೆಲ್ಲೋ ಹುಡುಕಿದೆ ನಾ,
ಕಳೆದು ಹೋದ ಅಮೂಲ್ಯ ಘಳಿಗೆಗಾಗಿ.
ಬಂದು ನೋಡಿದೆನಿಲ್ಲಿ ತಿರು-ತಿರುಗಿ ನಾ,
ಸಮಯವು ಉರುಳುತಿದೆ ವರುಷಗಳಾಗಿ.

ಅರಸಿದೆ ಮನವಿಂದು ನಿನ್ನಾ ಅಭಿಮಾನ,
ಭಾವನೆಗಳ ಚೆಲ್ಲಾಟದಿ ಬರಿದಾಗಿದೆ ಈ …