ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 5 – ಅಮೆರಿಕಾದ ಪಾರಿವಾಳದ ಸಂದೇಶ
ಅಮೆರಿಕಾದ ಪಾರಿವಾಳದ ಸಂದೇಶ
ಹೆಸರಿನ ಹುಡುಕಾಟ…
ಅಮ್ಮ, ಚಿಕ್ಕಿ, ತಂಗಿ ಎಲ್ಲರ ತಲೆ ತಿಂದರೂ ಆ ಒಂದು ಪತ್ರದ ಹೆಸರೇನೆಂದು ಸರಿಯಾಗಿ ಗೊತ್ತಾಗಲಿಲ್ಲ. ಅದು ಆಂಗ್ಲ ಭಾಷೆಯಲ್ಲಿ ‘ಏರ್ ಮೇಲ್ ‘ಎಂದೂ, ಹಿಂದಿಯಲ್ಲಿ ‘ಹವಾಯ್ ಪತ್ರ್’ ಎಂದೂ ಕರೆಯಲ್ಪಡುವುದೆಂದು ಗೂಗಲ್ ಮಹಾಶಯ ಎಷ್ಟು ಹೇಳಿದರೂ, ಅದು ನಾನಂದು ಆ ಪತ್ರ ಪೋಸ್ಟ್ ಆಫೀಸಿನಿಂದ ಹಾಗೆ ಹೇಳಿ …