Ingredients:

  1. Medium size – Ripened Mangoes – 2
  2. Honey – 1 table spoon
  3. Butter – 1 table spoon
  4. Coconut Vinegar – 1/4 tea spoon
  5. Coffee decoction- 1 tea spoon
  6. Instant Coffee Powder – 1/4 tea spoon
  7. Choice of your bread slices (wheat/sandwich/milk) – 4
  8. Salt – very small pinch

Method:

  • Cut the mangoes into small dice pieces and put it into a mixing bowl.
  • Add honey, coconut vinegar and 1/4 tea spoon of the butter, coffee decoction, coffee powder and stir well with spoon and slightly mash it.
  • Do not use any masher as it will make the mix too thick liquid.
  • Heat the tawa (Or dosa pan) and roast 2 slices of bread slightly by adding butter.
  • Once done, top one slice with the prepared mango mixture. Toast slightly and press the other slice on top with a spatula or your palm.
  • Toast both the sides slowly, and transfer to the plate.
  • Enjoy your sandwich!
  • You can skip ingredients # 4, 5 and 6 if you wish.
  • You can substitute butter with ghee.

ಕನ್ನಡದಲ್ಲಿ –

ಬೇಕಾಗುವ ಸಾಮಗ್ರಿಗಳು:

  1. ಮಧ್ಯಮ ಗಾತ್ರದ ಮಾವಿನ ಹಣ್ಣು – ೨
  2. ಜೇನುತುಪ್ಪ – ೧ ಟೇಬಲ್ ಚಮಚ
  3. ಬೆಣ್ಣೆ – ೧ ಟೇಬಲ್ ಚಮಚ
  4. ತೆಂಗಿನ ವಿನೇಗರ್ – ೧/೪ ಟೀ ಚಮಚ
  5. ಕಾಫಿ ಡಿಕಾಕ್ಷನ್ – ೧/೪ ಟೀ ಚಮಚ
  6. ಇನ್ಸ್ಟಾಂಟ್ ಕಾಫಿ ಪುಡಿ – ೧/೪ ಟೀ ಚಮಚ
  7. ನಿಮ್ಮ ಇಷ್ಟದ ಬ್ರೆಡ್ ಸ್ಲೈಸ್ – ೪
  8. ಉಪ್ಪು – ಚೂರು – ೧-೨ ಕ್ರಿಸ್ಟಲ್

ವಿಧಾನ:

  • ಮಾವಿನ ಹಣ್ಣನ್ನು ಸಣ್ಣಕೆ ಹೆಚ್ಚಿ ಒಂದು ಮಿಶ್ರಣ ಮಾಡುವ ಪಾತ್ರೆಗೆ ಹಾಕಿಕೊಳ್ಳಿ.
  • ಜೇನು ತುಪ್ಪ, ವಿನೇಗರ್, ೧/೪ ಟೀ ಚಮಚ ಬೆಣ್ಣೆ, ಕಾಫಿ ಡಿಕಾಕ್ಷನ್, ಕಾಫಿ ಹುಡಿ – ಎಲ್ಲವನ್ನೂ ಮಾವಿನ ಹಣ್ಣಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
  • ಮೆದುವಾಗಿ ಚಮಚದಲ್ಲಿ ಕಲಸಿಕೊಳ್ಳಿ.
  • ಕಾವಲಿ ಬಿಸಿಗಿಟ್ಟು, ಬ್ರೆಡ್ಡಿನ ಎರಡೂ ಬದಿಯನ್ನು ಹದವಾಗಿ ಬೆಣ್ಣೆ ಹಚ್ಚಿ ಬಿಸಿ ಮಾಡಿಕೊಳ್ಳಿ.
  • ನಂತರ ಒಂದು ಸ್ಲೈಸಿನ ಮೇಲೆ ತಯಾರಿಸಿಟ್ಟ ಮಾವಿನ ಮಿಶ್ರಣವನ್ನು ಹರಡಿ.
  • ಇನ್ನೊಂದು ಸ್ಲೈಸನ್ನು ಇದರ ಮೇಲಿಟ್ಟು ಮೆತ್ತಗೆ ಕೈಯಿಂದ ಅಥವಾ ಸಣ್ಣ ಸೌಟಿನಿಂದ ಒತ್ತಿ.
  • ಎರಡೂ ಬದಿಯನ್ನು ಹದವಾಗಿ ಟೋಸ್ಟ್ ಮಾಡಿಕೊಂಡು (ಮಗುಚುವುದು ಕಷ್ಟಕರ ಎನಿಸಿದರೆ ಒಂದು ಬದಿ ಮಾತ್ರವೇ ಟೋಸ್ಟ್ ಮಾಡಿಕೊಳ್ಳಿ, ಮಿಶ್ರಣ ಹೊರಬರುವ ಚಿಂತೆಯಿರುವುದಿಲ್ಲ, ಆಗಲೇ ಎರಡೂ ಬದಿಯನ್ನು ಮಿಶ್ರಣ ಹಾಕುವ ಮೊದಲೇ ಹದವಾಗಿ ಬಿಸಿ ಮಾಡಿಕೊಂಡದ್ದಾಗಿದೆ!), ತಟ್ಟೆಯಲ್ಲಿ ಹಾಕಿಕೊಳ್ಳಿ.
  • ನಿಮ್ಮಿಷ್ಟದಂತೆ ತಿನಿಸನ್ನು ತಿಂದು ಆನಂದಿಸಿ!
  • ಬೆಣ್ಣೆ ಇಲ್ಲದಿದ್ದರೆ ತುಪ್ಪವನ್ನೂ ಉಪಯೊಗಿಸಬಹುದು.
  • # 4, 5 ಮತ್ತು 6ನೇ ಸಾಮಗ್ರಿಗಳು ಇಲ್ಲದೆಯೂ, ಉಳಿದ ಸಾಮಗ್ರಿಗಳಿಂದಲೂ ಈ ತಿನಿಸು ತಯಾರಿಸಬಹುದು.
  • ಪ್ರತಿಯೊಂದು ಹಂತದಲ್ಲೂ ಕಾವಲಿ ಮಧ್ಯಮ ಉರಿಯಲ್ಲಿರಲಿ.
Mango Bread Sandwich
Mango Bread Sandwich
Mango Mixture
Mango Mixture
Tea and Table Spoons