ಬಾಳ ಪಯಣದಿ ಜೊತೆಯಾದ ಜೊತೆಗಾರ
ನಡು ನಿಲ್ದಾಣದಿ ಸೇರಿಕೊಂಡ ಸಹಪ್ರಯಾಣಿಕ
ಮುದದಿ ಕತ್ತಲಡಗಿಸಿ ಬೆಳಕ ಬೀರುವ ನೇಸರ
ನಭದಿ  ತಾರೆಗಳ ಮಧ್ಯೆ ಬಂದು ನಿಂತ ಚಂದ್ರಿಕ.

ಎಲ್ಲೂ ಸಲ್ಲದ ಮೇಲೆ, ಇಲ್ಲದ ನೆಪಗಳಾಚೆಗೆ
ಮೊಗದಿ ಮೇಳೈಸಿದ ಕಳೆಯು ಮಾರ್ದನಿಸಿ ಬತ್ತಿ
ಅಡಿಗಡಿಗೆ ತಲ್ಲಣದಿ ತುರುಬು ಕಟ್ಟಿದ ಪರಿಗೆ
ಪ್ರತಿ ಇಂಚಿಂಚೂ ಹೆಕ್ಕಿ ತೆಗೆದು ನೆನಪಿನ ಬುತ್ತಿ .

ತಾಪದಿ ಬರಿಯ ಬಿಸಿಲ ಬೇಗೆಯ ದಣಿವೋ ?
ಶಾಂತಗೊಳಿಸಿದ ಮನ ಸುಡುತಿರುವ ಬೇಗೆಯೋ ?
ಬಣ್ಣ – ಬಣ್ಣದಲಂಕಾರ ಸುಖವೆನಿಸಿದರೆ ತರವೋ?
ಭಾವನೆಗಳೊಡಗೂಡಿ ಬದುಕಿದ ಭಾವ ಸಂಗಾತಿಯೋ ?

– ಸ್ಮಿತಾ ಆಲಂಗಾರ್