ಪಲ್ಲವಿಯ ಅನುದೀಪ
ಬಾನಲಿ ರಂಗೇರಿದೆ ಆಕಾಶ ಬುಟ್ಟಿ
ದೀಪಾವಳಿಯ ಶುಭ ಸಾರುತ ಸುತ್ತಿ-ಸುತ್ತಿ
ನಭದಿ ಮಿರಿ-ಮಿರಿ ಮಿನುಗುತಿಹುದು ನಕ್ಷತ್ರ
ನೆಲದಿ ಮೂಡಿಹುದು ಬಣ್ಣ-ಬಣ್ಣದ ಚಿತ್ರ!
ಒಲವ ಸಾರುವ ನಗು ಅನಿರುದ್ಧನದು
ಪಲ್ಲವಿಸುತಿರಲಿ ಬದುಕಿನ ಪ್ರಣತಿಯದು
ಮನೆಯ ಸಾಲಂಕೃತ ಸಾಲು ಬೆಳಕಿನ ದೀಪ
ಮನದ ಬಾಳ ಬೆಳಗಲಿ ಸದಾ ಅನುದೀಪ!
~ ಸ್ಮಿತಾ ಆಲಂಗಾರ್…