ವಿಷು ಕಣಿ

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 5

ವಿಷು ವಿಶೇಷ

ಅಮ್ಮ: “ಹೌದು.. ಮೊದಲೆಲ್ಲ ಎಷ್ಟು ಗೌಜಿ ವಿಷುವಿನ ದಿನ”.

ಅಮ್ಮ: “ಹಾಗೇ ..ಈ ವಿಷು ಬಂದಾಗ ದೊಡ್ಡಪ್ಪನ ನೆನಪಾಗುತ್ತದೆ. ಎಲ್ಲರಿಗೂ ನಿತ್ಯಕ್ಕೆ ಉಡಲು ಹೊಸ ವಾಯಿಲ್ ಸೀರೆ ತರುತ್ತಿದ್ದರು ದೊಡ್ಡಪ್ಪ ಆಗ.. “.

ನಾನು: “ಹಾಂ.. ನನಗಿನ್ನೂ ನೆನಪಿದೆ.. ನಾವಷ್ಟೇ ಅಲ್ಲದೇ, ಕೆಲಸದವರೂ ಸಹ ಏನಾದರೊಂದು ಹೊಸ ಬೆಳೆ ತಂದು ಕೊಟ್ಟು, ಅಜ್ಜನ …

Charmadi Ghat

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 4 – II

ಕಂಡರಿಯದ ಕಡೂರಿನ ಮೊದಲ ಪಯಣ 

ಅಂತೂ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಮಿಸಿ ಚಹಾದ ಹೊತ್ತಿಗೆ ಎಲ್ಲರಿಗೂ ಈ ಗಡಸು ನೀರಿನ ಸಹವಾಸ ಸಾಕೆನಿಸಿತ್ತು. ಆದರೆ, ಬೇರೆ ದಾರಿಯಿಲ್ಲದೆ ಅಕ್ಕ – ಬಾವನಿಗೆ ಬೇಜಾರಾಗಬಾರದೆಂದು ಸುಮ್ಮನಿದ್ದೆವು. ಹಾಗೆಯೇ ನಾವೆಲ್ಲ ಸುಮಾರಷ್ಟು ಮುಖವಾಡ ಧರಿಸಿ, ನಗುತ್ತ, ಕಣ್ಣುಮುಚ್ಚಿಕೊಂಡು ಒಂದೇ ಗುಟುಕಿಗೆ ನೀರು ಕುಡಿಯುವ ಅವಸ್ಥೆ ನೋಡಿ, ನಮ್ಮ …

Charmadi Ghat

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 4

ಕಂಡರಿಯದ ಕಡೂರಿನ ಮೊದಲ ಪಯಣ 

ಅದು ಬೇಸಿಗೆಯ ರಜವೋ, ಮಧ್ಯಾವಧಿಯ ರಜವೋ ಎಂದು ನನಗೆ ಸರಿಯಾಗಿ ನೆನಪಿಲ್ಲ. ಬಹುಶಃ ಅದು ಬೇಸಿಗೆ ರಜ. ಇರಲಿ ಬಿಡಿ. ಈಗ ವಿಷಯಕ್ಕೆ ಬರೋಣ. ಇದು ನಮ್ಮ ಮೊದಲ ಕಡೂರು ಪ್ರಯಾಣದ ಕಥೆ! ಮೊದಲ ಬಾರಿಗೆ ನಾವೆಲ್ಲ ಆ ಊರು ನೋಡಲು ಹೊರಟಿದ್ದೆವು. ಅದಕ್ಕೆ ಕಾರಣ ನಮ್ಮ ಅಕ್ಕನ ಮದುವೆಯಾಗಿ …

seebe

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 4 – ಪೇರಳೆ

ನಿಮಗೆ ಪೇರಳೆ ಗೊತ್ತುಂಟಾ? ನೀವು ದಕ್ಷಿಣ ಕನ್ನಡದವರಾದರೆ ಗೊತ್ತಿರುತ್ತದೆ. ಹಾಗೆಯೇ ಅಲ್ಲಿಯವರಿಗೆ ೨ ರೀತಿಯ ಪೇರಳೆ ಗೊತ್ತಿರುತ್ತದೆ. ನನಗೆ ಅದು ಬಾಲ್ಯದ ಮಜದ ನೆನಪೂ ಸಹ ಹೌದು! ಗೊತ್ತಾಗದಿದ್ದರೆ ಮುಂದೆ ಓದಿ!

ಪೇರಳೆ ಅಂತ ನಾವು ಹೇಳುವುದು ಹೆಚ್ಚಾಗಿ ಸೀಬೆ ಹಣ್ಣಿಗೆ. ನಮ್ಮೂರಲ್ಲಿ ಎಲ್ಲರೂ ಸೀಬೆ ಕಾಯಿ / ಹಣ್ಣನ್ನು ಪೇರಳೆ ಎಂದೇ ಹೇಳುವುದು. ಪೇರಳೆಗೆ …

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 3

ಆಲೂಗಡ್ಡೆಯ ಸುತ್ತ…! 

ಮೊನ್ನೆ ಚೆನ್ನಾಗಿರುವ ಆಲೂಗಡ್ಡೆ ಆರಿಸಿ ತರಲು ಪಟ್ಟ ಅವಸ್ಥೆಯಲ್ಲಿ ಮತ್ತೆ ನಮ್ಮ ಮನೆಯ ಆಲೂಗಡ್ಡೆ ಸಾಂಬಾರ್ ನೆನಪಿಗೆ ಬಂತು. ಆಗೆಲ್ಲ ಮನೆಯಲ್ಲೇ ಬೆಳೆದ ತರಕಾರಿಗಳ ಅಡುಗೆಯದೇ ಕಾರುಬಾರು. ರುಚಿಯಾದ ಹೀರೆ, ಪಟಗಿಲ, ಬೆಂಡೆ, ತೊಂಡೆ, ಹಾಗಲ, ಹರಿವೆ, ಬಸಳೆ.. ಹೀಗೆ ಉದ್ದದ ಪಟ್ಟಿ ನೆನೆಸಿಕೊಂಡರೆ ಬಾಯಲ್ಲಿ ಈಗಲೂ ನೀರು ಬರುತ್ತದೆ!  ಆಗಿನ ರುಚಿ, …

tiruguva khurchi

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 2

ಅಣ್ಣ – ತಂಗಿ ಮತ್ತು ತಿರುಗುವ ಖುರ್ಚಿಯಲ್ಲಿನ ಸಾಮಾನ್ಯ ಜ್ಞಾನ !

ಅದೊಂದು ಭಾನುವಾರ. ಎಂದಿನಂತೆ ಸುಮಾರು 10:30 ರ ಅಂದಾಜು. ಅಜ್ಜ ಚಹಾ ಕುಡಿದು; ಸ್ಕೂಟರ್ ಹಿಡಿದು ಪೇಟೆಗೆ ಹೊರಡುತ್ತಲೇ ನನ್ನ ಸವಾರಿ ನಿಧಾನಕೆ ಅಜ್ಜನ ಓದಿನ ಕೋಣೆಗೆ ಹೊಕ್ಕಿತ್ತು. ಅಜ್ಜ ಇದ್ದಾಗ ಹೋಗುವುದು ಬೇರೆಯದೇ ಇತ್ತು. ಆದರೆ, ಅಜ್ಜ ಇಲ್ಲದಾಗ ಹೋಗಿ ಅಜ್ಜನ …

dolls

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 3 – ತಂಗಿಯ ಗೊಂಬೆ

“ಅಮ್ಮಾ .. ಎಂತ.. ಚಿಕ್ಕಿಯ ಲೆಟರ್ ಬಂತಾ? ಯಾವಾಗ ಬರುತ್ತಾರಂತೆ?”, ನಾನು ಕೇಳಿದ್ದೇ ತಡ ಬೆಕ್ಕುಗಳೊಂದಿಗೆ ಆಡುತ್ತಲಿದ್ದ ತಂಗಿಯ ಕಿವಿ ನಿಮಿರಿ ನಿಂತಿತ್ತು ಮುಂದಿನ ಮಾತುಗಳಿಗೆ.

“ಹಾಂ  .. ಸರಿಯಾಗಿ ಗೊತ್ತಿಲ್ಲ. ಮೊನ್ನೆ ಅಜ್ಜನಿಗೆ ಕರೆ ಮಾಡಿದ್ದಾಗ ನಾಡಿದ್ದು ಆಗಸ್ಟಿನಲ್ಲಿ ಬರಬಹುದೇನೋ ಎಂದಿರಬೇಕು..”.

“ಹಾ.. ಇನ್ನು ೨ ತಿಂಗಳುಗಳು ಮಾತ್ರ ಬಾಕಿ.. ಒಳ್ಳೆದಾಯ್ತು.. ಈಗ ತಂಗಿ …

rangoon-nightjasmine

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – ೧  ಪಾರಿಜಾತದ ಘಮವೂ, ಲಿಲಿ ಹೂವಿನ ಕಿಲಕಿಲವೂ..,

ಮೊನ್ನೆ ಶೋಭ ದೊಡ್ಡಮ್ಮ ತಮ್ಮ ಮನೆಗೆ ತಂದು ನೆಟ್ಟು ಬೆಳೆಸಿದ ಪಾರಿಜಾತದ ಗಿಡ/ಮರದ ಬಗ್ಗೆ ತಮ್ಮ ಬಾಂಧವ್ಯದ ಭಾವಗಳನ್ನು ಬಿಚ್ಚಿಟ್ಟಾಗ ನನಗೂ ನಮ್ಮ ಅಜ್ಜಿ ಮನೆಯಲ್ಲಿದ್ದ ಪಾರಿಜಾತದ ನೆನಪು ಮತ್ತೆ ಮರುಕಳಿಸಿತು. 

ಪಾರಿಜಾತ … ಅದರ ಘಮ ಅನುಭವಿಸಿದವರಿಗೇ ಗೊತ್ತು. ಅದರ ಹಸಿರ ಹಾಸಿಗೆಯ ಮೇಲೆ ಹರಡಿದ ಶುಭ್ರ ಬಿಳಿಯ ಬಣ್ಣದ ಹೂವುಗಳ ಚೆಂದ ಅಕ್ಷರಗಳಲ್ಲಿ …

Enable Notification OK No thanks