airmail

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 5 – ಅಮೆರಿಕಾದ ಪಾರಿವಾಳದ ಸಂದೇಶ

ಅಮೆರಿಕಾದ ಪಾರಿವಾಳದ ಸಂದೇಶ

ಹೆಸರಿನ ಹುಡುಕಾಟ…

ಅಮ್ಮ, ಚಿಕ್ಕಿ, ತಂಗಿ ಎಲ್ಲರ ತಲೆ ತಿಂದರೂ ಆ ಒಂದು ಪತ್ರದ ಹೆಸರೇನೆಂದು ಸರಿಯಾಗಿ ಗೊತ್ತಾಗಲಿಲ್ಲ. ಅದು ಆಂಗ್ಲ ಭಾಷೆಯಲ್ಲಿ ‘ಏರ್ ಮೇಲ್ ‘ಎಂದೂ, ಹಿಂದಿಯಲ್ಲಿ ‘ಹವಾಯ್ ಪತ್ರ್’ ಎಂದೂ ಕರೆಯಲ್ಪಡುವುದೆಂದು ಗೂಗಲ್ ಮಹಾಶಯ ಎಷ್ಟು ಹೇಳಿದರೂ, ಅದು ನಾನಂದು ಆ ಪತ್ರ ಪೋಸ್ಟ್ ಆಫೀಸಿನಿಂದ ಹಾಗೆ ಹೇಳಿ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 8

“ಈಗ ಹೇಳು, ಏನು ವಿಷಯಾಂತ? ಐಸ್ ಕ್ರೀಮ್ ತಿಂದದ್ದಾಯಿತಲ್ಲ?”, ಕೇಳಿದರು ಸುಮಂಗಲ.

“ಏನಿಲ್ಲ, ನಮ್ಮ ಆಫೀಸಿನಲ್ಲಿ ಡ್ರೆಸ್ ಕೋಡ್ ಡಿಸೈನ್ ಮಾಡಲು ಅವಕಾಶ ಸಿಕ್ಕಿತ್ತು. ನಾನು ಮಾಡಿದ್ದು ಆಯ್ಕೆಯಾಯಿತು ಕೊನೆಗೂ. ವೋಟಿಂಗ್ ಎಲ್ಲ ನಡೀತು. ಆದರೆ ನಿಜವಾಗಲೂ ಎಲ್ಲರಿಗೂ ನನ್ನ ಡಿಸೈನ್ ಈ ಮಾಡೆರ್ನ್ ಕಾಲದಲ್ಲಿ ಇಷ್ಟ ಆಗಿದ್ದು ಆಶ್ಚರ್ಯದ ಜೊತೆ, ಖುಷಿಯೂ ಆಯಿತು. ಅದಕ್ಕೆ …

AeroIndia2023

ತಂಗಿ ಹೇಳಿದ ಲೋಹದ ಹಕ್ಕಿಗಳ ಕಥೆ

ಹುರುಪಿನ ತಯಾರಿ

ತಂಗಿ ಗಡದ್ದಾಗಿ ೧೦ ದಿನ ಮೊದಲೇ ತಾನು ಮಗನಿಗೆ ಲೋಹದ ಹಕ್ಕಿಗಳ ಕಲರವ ತೋರಿಸಲು ಹೊರಟಿದ್ದೇನೆ ಎಂದಾಗಲೇ ನನಗೆ ಮನದ ಮೂಲೆಯಲ್ಲಿ “ಒಳ್ಳೆಯದೇ, ಆದರೆ ಇವಳಿಗೆ ಅಲ್ಲಿ ಸಾಕು-ಬೇಕಾಗಲಿದೆ. ನೂಕುನುಗ್ಗಲು, ಜನಜಂಗುಳಿಯ ಬಗ್ಗೆ ಗೊತ್ತಿದ್ದೂ ಇಂತಹ ಸಾಹಸಕ್ಕೆ ಕೈ ಹಾಕಲು ಹೊರಟವಳ ಬಗ್ಗೆ ಮೆಚ್ಚಿಗೆಯೂ ಎನಿಸಿತ್ತು. ಅದೇನೋ ಹೇಳುತ್ತಾರಲ್ಲ?, ಮನಸ್ಸಿದ್ದರೆ ಮಾರ್ಗ!. ಹಾಗೆ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 5

ಅದೊಂದು ಭಾನುವಾರ ರಜತ್ ಬಹಳ ಖುಷಿಯಾಗಿದ್ದನು. ಬೆಳಗ್ಗೆ ಬೇಗನೆ ಎದ್ದು ಎಲ್ಲೋ ಹೊರಡಲು ತಯಾರಾಗಿದ್ದನ್ನು ಕಂಡು ರಮ ಕೇಳಿದರು, “ಏನೋ? ಭಾನುವಾರ ಇಷ್ಟು ಬೇಗ ಯಾವ ಕಡೆ ಹೊರಟೆ? ತಿಂಡಿ ಬೇಡವಾ?”.

“ಬೇಡಮ್ಮ. ಇವತ್ತು ತುಂಬಾ ಮುಖ್ಯವಾದ ಕೆಲಸವಿದೆ. ಆದಷ್ಟು ಬೇಗ ರಾಯಲ್ ಲಿಲಿಸ್ ಹೋಟೆಲಿಗೆ ಹೋಗಬೇಕು. ಕೆಲವೊಂದು ವ್ಯವಸ್ಥೆಗಳನ್ನು ನಾನೇ ಖುದ್ದು ನಿಂತು ನೋಡಿಕೊಳ್ಳಬೇಕು. …

ಕನ್ನಡಿ

ದಟ್ಟವಾದ ಕಪ್ಪು ಕಾಡಿಗೆಯದು
ಶತಪ್ರಯತ್ನ ಮಾಡುತಲಿಹುದು
ಕಂಡರೂ ಕಾಣದಂತಿಹ ಅಶ್ರುಗಳ
ಆ ಕಣ್ರೆಪ್ಪೆಗಳಡಿ ಮರೆಮಾಚಿಡಲು

ಗಾಢ ಬಣ್ಣ ಮೆತ್ತಿದ ತುಟಿಯಂಚಿನಲಿ
ಅವಿತಿಹುದು  ನೋವಿನ ಛಾಯೆ
ಕೆಂಪು ಅಧರದಿ ಮೂಡಿಹ ಶುಷ್ಕ ನಗು
ಮಾಸಿಹುದು ಅಗಾಧ ವಿಷಾದವನು

ಮೊಗದ ತುಂಬಾ ತುಂಬಿದೆ ಥಳುಕು –
ಬಳುಕಿನ ಕೃತಕ ಸೌಂದರ್ಯ ವರ್ಧಕ
ಮೂರ್ತವೆತ್ತ ಗಾಂಭೀರ್ಯ ಬೇಕೆಂದರೂ
ವಿಷದ ಪಡಿಸಲಾರದ …

seebe

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 4 – ಪೇರಳೆ

ನಿಮಗೆ ಪೇರಳೆ ಗೊತ್ತುಂಟಾ? ನೀವು ದಕ್ಷಿಣ ಕನ್ನಡದವರಾದರೆ ಗೊತ್ತಿರುತ್ತದೆ. ಹಾಗೆಯೇ ಅಲ್ಲಿಯವರಿಗೆ ೨ ರೀತಿಯ ಪೇರಳೆ ಗೊತ್ತಿರುತ್ತದೆ. ನನಗೆ ಅದು ಬಾಲ್ಯದ ಮಜದ ನೆನಪೂ ಸಹ ಹೌದು! ಗೊತ್ತಾಗದಿದ್ದರೆ ಮುಂದೆ ಓದಿ!

ಪೇರಳೆ ಅಂತ ನಾವು ಹೇಳುವುದು ಹೆಚ್ಚಾಗಿ ಸೀಬೆ ಹಣ್ಣಿಗೆ. ನಮ್ಮೂರಲ್ಲಿ ಎಲ್ಲರೂ ಸೀಬೆ ಕಾಯಿ / ಹಣ್ಣನ್ನು ಪೇರಳೆ ಎಂದೇ ಹೇಳುವುದು. ಪೇರಳೆಗೆ …

Students

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ – ವಿದ್ಯಾರ್ಥಿಗಳಲ್ಲಿ ಭ್ರಾತೃತ್ವದ ಅರಿವು

“Teaching kids to count is fine, but teaching them what counts is best”.
– Bob Talbert

ನನಗೆ ಮೊದಲಿಂದಲೂ  ಬೋಧನಾ ಕಾರ್ಯ ಒಂದು ರೀತಿಯಲ್ಲಿ ಉತ್ಸಾಹದಾಯಕ ಕಾರ್ಯ. ನನಗೆ ತಿಳಿದ ವಿಷಯವನ್ನು ಪ್ರತಿ ಬಾರಿಯೂ ವಿಭಿನ್ನವಾಗಿ, ಸರಿಯಾಗಿ ಅರ್ಥವಾಗುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿ, ಅವರಿಗೆ ಅದರಿಂದ ಒಂದಿನಿತಾದರೂ ಪ್ರಯೋಜನವಾದರೆ ಒಂದು …

dolls

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 3 – ತಂಗಿಯ ಗೊಂಬೆ

“ಅಮ್ಮಾ .. ಎಂತ.. ಚಿಕ್ಕಿಯ ಲೆಟರ್ ಬಂತಾ? ಯಾವಾಗ ಬರುತ್ತಾರಂತೆ?”, ನಾನು ಕೇಳಿದ್ದೇ ತಡ ಬೆಕ್ಕುಗಳೊಂದಿಗೆ ಆಡುತ್ತಲಿದ್ದ ತಂಗಿಯ ಕಿವಿ ನಿಮಿರಿ ನಿಂತಿತ್ತು ಮುಂದಿನ ಮಾತುಗಳಿಗೆ.

“ಹಾಂ  .. ಸರಿಯಾಗಿ ಗೊತ್ತಿಲ್ಲ. ಮೊನ್ನೆ ಅಜ್ಜನಿಗೆ ಕರೆ ಮಾಡಿದ್ದಾಗ ನಾಡಿದ್ದು ಆಗಸ್ಟಿನಲ್ಲಿ ಬರಬಹುದೇನೋ ಎಂದಿರಬೇಕು..”.

“ಹಾ.. ಇನ್ನು ೨ ತಿಂಗಳುಗಳು ಮಾತ್ರ ಬಾಕಿ.. ಒಳ್ಳೆದಾಯ್ತು.. ಈಗ ತಂಗಿ …

ಬಿಗುಮಾನದ ಭಾರ

ಭಾವಗಳ ಭಾರಕ್ಕೆ ಬೇರಾಗಿದೆ ಬಿಗುಮಾನ,
ಮನವ ಸಂತೈಸಬೇಕಿದೆ ನೀನೀ ದಿನ.
ಅರಸುತಿವೆ ಕಣ್ಗಳು ನಾ ಮೆಚ್ಚಿದ ಜೊತೆಗೆ,
ಬಯಸುತಿದೆ ಮನ ಬೆಚ್ಚನೆಯ ಅಪ್ಪುಗೆ.

ದೂರದ ತೀರದಲ್ಲೆಲ್ಲೋ ಹುಡುಕಿದೆ ನಾ,
ಕಳೆದು ಹೋದ ಅಮೂಲ್ಯ ಘಳಿಗೆಗಾಗಿ.
ಬಂದು ನೋಡಿದೆನಿಲ್ಲಿ ತಿರು-ತಿರುಗಿ ನಾ,
ಸಮಯವು ಉರುಳುತಿದೆ ವರುಷಗಳಾಗಿ.

ಅರಸಿದೆ ಮನವಿಂದು ನಿನ್ನಾ ಅಭಿಮಾನ,
ಭಾವನೆಗಳ ಚೆಲ್ಲಾಟದಿ ಬರಿದಾಗಿದೆ ಈ …

ಪ್ರಜೆಗಳೇ ಪ್ರಭುಗಳಾದ ಕರುನಾಡಿನಲ್ಲೊಂದು ಸುತ್ತು ಗಿರಕಿ !

“Good people do not need laws to tell them to act responsibly, while bad people will find a way around the laws” – Plato.

“ಒಳ್ಳೆಯವರಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಕಾನೂನಿನ ನಿಯಮಗಳ ಅಗತ್ಯವಿಲ್ಲ, ಆದರೆ ಕೆಟ್ಟವರು ಕಾನೂನನ್ನು ಪರಿಪಾಲಿಸದೇ ಇರಲು ತಮ್ಮದೇ ದಾರಿಗಳನ್ನು ಕಾನೂನು ಮೂಲಕವೇ ಹುಡುಕಾಡುತ್ತಿರುತ್ತಾರೆ” …

ಕ್ಷಮಿಸಿ, ನಿಮ್ಮ ಜಯನಗರ ಈಗ ಮೊದಲಿನಂತಿಲ್ಲ 

ಭಾನುವಾರ..! ಭಾನುವಾರ ಬಂತೆದರೆ ಸುತ್ತಾಡಿಕೊಂಡು ಸಮಯ ವ್ಯರ್ಥ ಮಾಡುವವರೆಂದೇ ಪ್ರ(ಕು)ಖ್ಯಾತಿ ಪಡೆದಿರುವ ಬೆಂಗಳೂರಿಗರು ನಾವು! ಈ ಹೆಸರಿಗೆ ಧಕ್ಕೆ ತಂದು; ಹೀಗೆಂದು ಭಾವಿಸುವ ದೊಡ್ಡ ಮಟ್ಟಿನ ಜನಸಮೂಹವನ್ನು ನೋವಿನ ಕೂಪಕ್ಕೆ ತಳ್ಳಿದ ಪಾಪ ನಮಗೆ ಅಂಟಬಾರದೆಂದು ಧೃಢ ಸಂಕಲ್ಪಗೈದು ನಾವು ಕಳೆದ ಭಾನುವಾರ ಜಯನಗರದತ್ತ ಹೊರಟೆವು! 

ಮಧ್ಯಾಹ್ನ ಊಟದ ಹೊತ್ತಿನವರೆಗೂ ಸೂರ್ಯನೇ ಊಟಕ್ಕೆಂದು ಭುವಿಗಿಳಿದು ಬಂದಿದ್ದನೇನೋ …