mungarina-mounaraga

ಮುಂಗಾರಿನ ಮೌನರಾಗ – ಭಾಗ – 10

ನಿಧಾನಕ್ಕೆ ಕಣ್ಣು ತೆರೆದು ನೋಡುವಾಗ ಆಸ್ಪತ್ರೆಯಲ್ಲಿ ಮಲಗಿದ್ದನು ರಜತ್! ಏನಾಯ್ತೆಂದು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದನು. ಅಸ್ಪಷ್ಟವಾದ ಚಿತ್ರಣವೊಂದು ಕಣ್ಣ ಮುಂದೆ ಬಂತು. ವೇಗವಾಗಿ ಬಂದ ಲಾರಿ ತಾನು ಬ್ರೇಕ್ ಹಾಕಬೇಕಾದರೆ ಮೊದಲೇ ಬಂದು ತನ್ನ ಗಾಡಿಗೆ ಎದುರಿಂದ ಬಡಿದಿತ್ತು. ಗಾಬರಿಯಲ್ಲಿ ಲೆಕ್ಕಕ್ಕಿಂತ ಹೆಚ್ಚಾಗಿ ಒತ್ತಿದ ಬ್ರೇಕಿನಿಂದಾಗಿ ಗಾಡಿಯೇನೋ ನಿತ್ತಿತ್ತು. ಆದರೆ ಅವನ ಕೈ-ಕಾಲಿಗೆಲ್ಲ ಗಾಯವಾಗಿ, ಶಾಕಿನಿಂದ …

rangoon-nightjasmine

ಪಾರಿಜಾತದ ಘಮವೂ,..

ಮಂಜು ಮುಸುಕಿದ ಮುಂಜಾವಿನಲಿ
ಹನಿ-ಹನಿ ಇಬ್ಬನಿ ತಬ್ಬಿದ ಇಳೆಯಲಿ
ಆಗಸದಿಂದ ನೇಸರನ ಕಿರಣಗಳೊಂದಿಗೆ
ಧರೆಗಿಳಿದ ಪಾರಿಜಾತದ ಘಮವೂ …!

ಗೂಡಿಗೆ ಮರಳುವ ಹಕ್ಕಿಗಳ ಚಿಲಿಪಿಲಿಯಲಿ
ಹಾರುವ ದುಂಬಿಗಳ ನಾದ ಝೇಂಕಾರದಲಿ
ಗಾಢ ಹಸಿರ ಸಿರಿಯ ಮೇಲೆ ಹರಡಿ ಬಿದ್ದಂತೆ
ಹೊಂಬಣ್ಣದ ಲಿಲಿ ಹೂವಿನ ಕಿಲಕಿಲ ನಗುವೂ …!

ಮುದ್ದಿನ ತಂಗಿಯೊಂದಿಗೆ ಮನದಣಿಯೆ
ಮಣ್ಣಲಿ ಆಡಿದ ಆಟಗಳೊಂದಿಗೆ…

rangoon-nightjasmine

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – ೧  ಪಾರಿಜಾತದ ಘಮವೂ, ಲಿಲಿ ಹೂವಿನ ಕಿಲಕಿಲವೂ..,

ಮೊನ್ನೆ ಶೋಭ ದೊಡ್ಡಮ್ಮ ತಮ್ಮ ಮನೆಗೆ ತಂದು ನೆಟ್ಟು ಬೆಳೆಸಿದ ಪಾರಿಜಾತದ ಗಿಡ/ಮರದ ಬಗ್ಗೆ ತಮ್ಮ ಬಾಂಧವ್ಯದ ಭಾವಗಳನ್ನು ಬಿಚ್ಚಿಟ್ಟಾಗ ನನಗೂ ನಮ್ಮ ಅಜ್ಜಿ ಮನೆಯಲ್ಲಿದ್ದ ಪಾರಿಜಾತದ ನೆನಪು ಮತ್ತೆ ಮರುಕಳಿಸಿತು. 

ಪಾರಿಜಾತ … ಅದರ ಘಮ ಅನುಭವಿಸಿದವರಿಗೇ ಗೊತ್ತು. ಅದರ ಹಸಿರ ಹಾಸಿಗೆಯ ಮೇಲೆ ಹರಡಿದ ಶುಭ್ರ ಬಿಳಿಯ ಬಣ್ಣದ ಹೂವುಗಳ ಚೆಂದ ಅಕ್ಷರಗಳಲ್ಲಿ …

ಘಟ್ಟದವಳು

ಘಟ್ಟದವಳು….!

ಘಟ್ಟದವಳು…! ಹೌದು…, ಅವಳು ಘಟ್ಟದವಳೆ. ಒಟ್ಟಿನಲ್ಲಿ ಪಶ್ಚಿಮ ಘಟ್ಟದ ಮೇಲಿನ ಊರು ಅವಳದು! ಅವಳ ಪರಿಚಯ ನಮಗಾಗಿದ್ದು ನಮ್ಮ ಅಣ್ಣನ ಮೂಲಕ! ಅದೊಂದು ದಿನ ನನ್ನ ಅಣ್ಣ ನಾನು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ ಮೊಬೈಲಿಗೆ ಒಂದು ಸಂದೇಶ ಕಳುಹಿಸಿ, ಕರೆ ಮಾಡಿ ಹೇಳಿದನು, “ಇದು ನಿನ್ನ ಅತ್ತಿಗೆಯಾಗುವವಳ ಈಮೇಲ್ ಐಡಿ ಮತ್ತು ಮೊಬೈಲ್ ನಂಬರ್. ಅವಳ …

ಮಾತು ಮೌನವಾದಾಗ 

ಕೂಡಿ – ಆಡಿ, ನೋವ-ನಲಿವ ಹಂಚಿಕೊಂಡ ಕೈಗಳು
ಕಾಣದಂತೆ ಮುಸುಕಿದ್ದವು ಬಿಗುಮಾನದ ಬೇಗೆಗಳು |
ಹತ್ತಿರವಿದ್ದರೂ ದೂರ ಸರಿದಿವೆ ಬೆಸೆದಿದ್ದ ಬಂಧಗಳು
ಸೆರಗಿನ ಕೆಂಡದಂತೆ ಸುಡುತಿದೆ ಸಂಬಂಧಗಳು ||

ರೆಕ್ಕೆ-ಪುಕ್ಕ ಬಲಿತ ಮೇಲೆ ತನ್ನದೇನಿದೆಯೆಂದು
ದೂರತೀರವ ಸೇರಿತ್ತು ಬರಿದಾದ ಮನ ತನ್ನದೆಂದು|
ಗುಟಿಕನಿತ್ತು ಗುಬ್ಬಿಯೇನೋ ಅಳಿಯಿತು
ಕಂಡರೂ ಕಾಣಿಸದ ಕಣ್ಣೀರು ಮಾತ್ರ ಉಳಿಯಿತು ||

ಕಾರ್ಮೋಡ

ಮಳೆಯು ಮಾತನಾಡುತ್ತಿದೆ ..!

ತಂಗಾಳಿ ಬೀಸಿ ತಂದ ಇಂಪಾದ ಇಂಚರ 

ಮುತ್ತಿನ ತೋರಣದ ರಮ್ಯ ಚಿತ್ರಾಲಂಕಾರ

ನದಿ-ವನಗಳ ನಡುವಿನ ಹನಿ ನೀರಿನ ಝಳ-ಝಳ

ಕೋಲ್ಮಿಂಚಿನ ಕಿರಣಗಳ ಮೀರಿಹ ಸ್ವಾತಿ ಮುತ್ತಿನ ಫಳ-ಫಳ !

ಸಾಲಂಕೃತ ಧರೆಯ ವಿಹಂಗಮ ಚಿತ್ರಣ 

ತಣಿಸಿಹುದು ಭುವಿಯ ಭೀಕರ ತಲ್ಲಣ 

ಸುಮಧುರ ದುಂಬಿಗಳ ನಾದ ಝೇಂಕಾರ 

ಮುನಿಸ ತೋರಿಪ ವಿನೂತನ ಬಗೆಯ ಸಾಕಾರ!

ಪ್ರಕೃತಿ ಕರೆದೊಯ್ಯುವುದು ಒಡಲೊಳು ಬಹುದೂರ ತೀರ 

ಮಾರ್ದನಿಸಲು ಕ್ಷಣ-ಕ್ಷಣಗಳ ಭಾವ ಸಾಕ್ಷಾತ್ಕಾರ

ಸ್ಪರ್ಶ ಸೊಂಪಾದ ತಂಗಾಳಿಯು ಬೀಸುತಲಿದೆ

ಮತ್ತೆ – ಮತ್ತೆ ಮಳೆಯು ಮಾತಾಡುತ್ತಿದೆ !

– ಸ್ಮಿತಾ ಆಲಂಗಾರ್ …

ಕ್ಷಮಿಸಿ, ನಿಮ್ಮ ಜಯನಗರ ಈಗ ಮೊದಲಿನಂತಿಲ್ಲ 

ಭಾನುವಾರ..! ಭಾನುವಾರ ಬಂತೆದರೆ ಸುತ್ತಾಡಿಕೊಂಡು ಸಮಯ ವ್ಯರ್ಥ ಮಾಡುವವರೆಂದೇ ಪ್ರ(ಕು)ಖ್ಯಾತಿ ಪಡೆದಿರುವ ಬೆಂಗಳೂರಿಗರು ನಾವು! ಈ ಹೆಸರಿಗೆ ಧಕ್ಕೆ ತಂದು; ಹೀಗೆಂದು ಭಾವಿಸುವ ದೊಡ್ಡ ಮಟ್ಟಿನ ಜನಸಮೂಹವನ್ನು ನೋವಿನ ಕೂಪಕ್ಕೆ ತಳ್ಳಿದ ಪಾಪ ನಮಗೆ ಅಂಟಬಾರದೆಂದು ಧೃಢ ಸಂಕಲ್ಪಗೈದು ನಾವು ಕಳೆದ ಭಾನುವಾರ ಜಯನಗರದತ್ತ ಹೊರಟೆವು! 

ಮಧ್ಯಾಹ್ನ ಊಟದ ಹೊತ್ತಿನವರೆಗೂ ಸೂರ್ಯನೇ ಊಟಕ್ಕೆಂದು ಭುವಿಗಿಳಿದು ಬಂದಿದ್ದನೇನೋ …

ಟಿನ್ ಟಿನ್ ಟಿನ್ – ಕರೆಗಂಟೆ

ಟಿನ್ ಟಿನ್ ಟಿನ್  ….. ಏನಿದು ಶಬ್ದ ಎಂದುಕೊಂಡಿರಾ? ಇದು ನಾವು – ನೀವೆಲ್ಲ ನಮ್ಮ ಬಾಲ್ಯದಲ್ಲಿ ಕೇಳಿಸಿಕೊಂಡಿದ್ದ ಕರೆಗಂಟೆ! ಹೌದು .. ಯಾವುದರ ಕರೆಗಂಟೆ ?? ಅದೇ… ಐಸ್ಕ್ಯಾಂಡಿ…! ಐಸ್ಕ್ಯಾಂಡಿ..ಐಸ್ಕ್ಯಾಂಡಿ..ಟಿನ್ ಟಿನ್ ಟಿನ್..! 

ಎಷ್ಟೊಂದು ವಿಧಗಳಲ್ಲಾ ನಮ್ಮ ಐಸ್ಕ್ಯಾಂಡಿಗಳಲ್ಲಿ? ಬೆಲ್ಲದ ಕ್ಯಾಂಡಿ, ದೂಧ್ ಕ್ಯಾಂಡಿ, ಆರೆಂಜ್ ಕ್ಯಾಂಡಿ, ಕೆಂಪು ಕ್ಯಾಂಡಿ ..ಇತ್ಯಾದಿ ಇತ್ಯಾದಿ. ಸುಮಾರು ಹೆಸರು ಮರೆತು ಹೋಗಿದೆಯೇನೋ?!! ನೆನಪಾದರೆ ನೀವೂ …

ಪ್ರತಿಬಿಂಬ

ಮನದ ಭಾವನೆಗಳ ಬದಲಾಯಿಸಿಕೊಂಡರೂ 
ಮುಖದ ಭಾವಗಳು ಬದಲಾದಾವೇ…?
ಭಾವನೆಗಳ ಭಾರಕ್ಕೆ ನಲುಗಿಹೋಗಿವೆ ಭಾವಗಳು
ಬರಿದಾಗಿವೆ ಬಣ್ಣ ತುಂಬಬೇಕಾದ ಚಿತ್ತಾರಗಳು!

ನೀಲ ಗಗನದಿ ತುಂಬಿವೆ ಕಗ್ಗತ್ತಲ ಕಾರ್ಮೋಡಗಳು 
ಬಾನಂಗಳದಿ ಕಳೆದು ಹೋಗಿವೆ ನಕ್ಷತ್ರಗಳು!
ಮುಂಗಾರಿನ ಆಗಮನದ ನೀರೀಕ್ಷೆಯಲಿವೆ ಬಾನಾಡಿಗಳು
ಭೋರ್ಗರೆಯುತ ಮಿಡಿಯುತಲಿವೆ ಸಮುದ್ರದಲೆಗಳು!

ನದಿಯ ತಿಳಿನೀರದೀಗ ತೋರಿದೆ ಆಗಸದ ನಿಜ ಬಿಂಬ 
ಸಪ್ತಸಾಗರದಲೆಗಳವು ಮರೆಮಾಚಿವೆಯಾ ಪ್ರತಿಬಿಂಬ!
ಮನವ …

ಒಂದು ಮಾವಿನ ಹಣ್ಣಿನ ಕಥೆ 

ಮಾವಿನ ಹಣ್ಣು – ಇದು ನನ್ನ ಬಾಲ್ಯದಲ್ಲಿ ಕಳೆದ ಮಾವಿನ ಹಣ್ಣಿನ ಸವಿಯಾದ ಕಥೆ…ಬಾಲ್ಯದಲ್ಲಿ ಆಸ್ವಾದಿಸಿದಷ್ಟು ಸವಿ ಬಹುಶಃ ಮತ್ತೆಂದೂ ಸವಿಯಯುವುದಿಲ್ಲ ನಾವು – ಅದು ಎಷ್ಟೇ ಕಡಿಮೆಯಿರಲಿ, ಹೆಚ್ಚಿರಲಿ. ಹೇಗೇ ಇರಲಿ. ಆ ಕ್ಷಣಗಳು ಮತ್ತೆ ಮರಳಿ ಬಾರದ ಅಮೂಲ್ಯ ಘಳಿಗೆಗಗಳು! ಈ ಲಾಕ್ ಡೌನ್ ಸಮಯದಲ್ಲಿ ಪೇಟೆಯಿಂದ ತರಿಸಿಕೊಂಡು ಮಾವಿನ ಹಣ್ಣು ತಿನ್ನುತ್ತಿರುವಾಗ …

Protein Powder and A Healthy Drink

Ingredients:

  1. Almonds – 100 grams
  2. Cashew nuts – 100 grams
  3. Kashmir Kesar – 3-4 strings
  4. Pistachios – 100 grams
  5. Pumpkin Seeds – 50 grams
  6. Milk – 1 cup
  7. Jaggery powder – 1 tsp.

Method:

  • Dry roast all the ingredients separately,