ಮುಂಗಾರಿನ ಮೌನರಾಗ – ಭಾಗ – 8
“ಈಗ ಹೇಳು, ಏನು ವಿಷಯಾಂತ? ಐಸ್ ಕ್ರೀಮ್ ತಿಂದದ್ದಾಯಿತಲ್ಲ?”, ಕೇಳಿದರು ಸುಮಂಗಲ.
“ಏನಿಲ್ಲ, ನಮ್ಮ ಆಫೀಸಿನಲ್ಲಿ ಡ್ರೆಸ್ ಕೋಡ್ ಡಿಸೈನ್ ಮಾಡಲು ಅವಕಾಶ ಸಿಕ್ಕಿತ್ತು. ನಾನು ಮಾಡಿದ್ದು ಆಯ್ಕೆಯಾಯಿತು ಕೊನೆಗೂ. ವೋಟಿಂಗ್ ಎಲ್ಲ ನಡೀತು. ಆದರೆ ನಿಜವಾಗಲೂ ಎಲ್ಲರಿಗೂ ನನ್ನ ಡಿಸೈನ್ ಈ ಮಾಡೆರ್ನ್ ಕಾಲದಲ್ಲಿ ಇಷ್ಟ ಆಗಿದ್ದು ಆಶ್ಚರ್ಯದ ಜೊತೆ, ಖುಷಿಯೂ ಆಯಿತು. ಅದಕ್ಕೆ …