ಪಾರಿಜಾತದ ಘಮವೂ,..

ಮಂಜು ಮುಸುಕಿದ ಮುಂಜಾವಿನಲಿ
ಹನಿ-ಹನಿ ಇಬ್ಬನಿ ತಬ್ಬಿದ ಇಳೆಯಲಿ
ಆಗಸದಿಂದ ನೇಸರನ ಕಿರಣಗಳೊಂದಿಗೆ
ಧರೆಗಿಳಿದ ಪಾರಿಜಾತದ ಘಮವೂ …!

ಗೂಡಿಗೆ ಮರಳುವ ಹಕ್ಕಿಗಳ ಚಿಲಿಪಿಲಿಯಲಿ
ಹಾರುವ ದುಂಬಿಗಳ ನಾದ ಝೇಂಕಾರದಲಿ
ಗಾಢ ಹಸಿರ ಸಿರಿಯ ಮೇಲೆ ಹರಡಿ ಬಿದ್ದಂತೆ
ಹೊಂಬಣ್ಣದ ಲಿಲಿ ಹೂವಿನ ಕಿಲಕಿಲ ನಗುವೂ …!

ಮುದ್ದಿನ ತಂಗಿಯೊಂದಿಗೆ ಮನದಣಿಯೆ
ಮಣ್ಣಲಿ ಆಡಿದ ಆಟಗಳೊಂದಿಗೆ…

Tags:

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – ೧  ಪಾರಿಜಾತದ ಘಮವೂ, ಲಿಲಿ ಹೂವಿನ ಕಿಲಕಿಲವೂ..,

ಮೊನ್ನೆ ಶೋಭ ದೊಡ್ಡಮ್ಮ ತಮ್ಮ ಮನೆಗೆ ತಂದು ನೆಟ್ಟು ಬೆಳೆಸಿದ ಪಾರಿಜಾತದ ಗಿಡ/ಮರದ ಬಗ್ಗೆ ತಮ್ಮ ಬಾಂಧವ್ಯದ ಭಾವಗಳನ್ನು ಬಿಚ್ಚಿಟ್ಟಾಗ ನನಗೂ ನಮ್ಮ ಅಜ್ಜಿ ಮನೆಯಲ್ಲಿದ್ದ ಪಾರಿಜಾತದ ನೆನಪು ಮತ್ತೆ ಮರುಕಳಿಸಿತು. 

ಪಾರಿಜಾತ … ಅದರ ಘಮ ಅನುಭವಿಸಿದವರಿಗೇ ಗೊತ್ತು. ಅದರ ಹಸಿರ ಹಾಸಿಗೆಯ ಮೇಲೆ ಹರಡಿದ ಶುಭ್ರ ಬಿಳಿಯ ಬಣ್ಣದ ಹೂವುಗಳ ಚೆಂದ ಅಕ್ಷರಗಳಲ್ಲಿ …

Tags: