ಕ್ಷಮಿಸಿ, ನಿಮ್ಮ ಜಯನಗರ ಈಗ ಮೊದಲಿನಂತಿಲ್ಲ
ಭಾನುವಾರ..! ಭಾನುವಾರ ಬಂತೆದರೆ ಸುತ್ತಾಡಿಕೊಂಡು ಸಮಯ ವ್ಯರ್ಥ ಮಾಡುವವರೆಂದೇ ಪ್ರ(ಕು)ಖ್ಯಾತಿ ಪಡೆದಿರುವ ಬೆಂಗಳೂರಿಗರು ನಾವು! ಈ ಹೆಸರಿಗೆ ಧಕ್ಕೆ ತಂದು; ಹೀಗೆಂದು ಭಾವಿಸುವ ದೊಡ್ಡ ಮಟ್ಟಿನ ಜನಸಮೂಹವನ್ನು ನೋವಿನ ಕೂಪಕ್ಕೆ ತಳ್ಳಿದ ಪಾಪ ನಮಗೆ ಅಂಟಬಾರದೆಂದು ಧೃಢ ಸಂಕಲ್ಪಗೈದು ನಾವು ಕಳೆದ ಭಾನುವಾರ ಜಯನಗರದತ್ತ ಹೊರಟೆವು!
ಮಧ್ಯಾಹ್ನ ಊಟದ ಹೊತ್ತಿನವರೆಗೂ ಸೂರ್ಯನೇ ಊಟಕ್ಕೆಂದು ಭುವಿಗಿಳಿದು ಬಂದಿದ್ದನೇನೋ …
