ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 3 – ತಂಗಿಯ ಗೊಂಬೆ
“ಅಮ್ಮಾ .. ಎಂತ.. ಚಿಕ್ಕಿಯ ಲೆಟರ್ ಬಂತಾ? ಯಾವಾಗ ಬರುತ್ತಾರಂತೆ?”, ನಾನು ಕೇಳಿದ್ದೇ ತಡ ಬೆಕ್ಕುಗಳೊಂದಿಗೆ ಆಡುತ್ತಲಿದ್ದ ತಂಗಿಯ ಕಿವಿ ನಿಮಿರಿ ನಿಂತಿತ್ತು ಮುಂದಿನ ಮಾತುಗಳಿಗೆ.
“ಹಾಂ .. ಸರಿಯಾಗಿ ಗೊತ್ತಿಲ್ಲ. ಮೊನ್ನೆ ಅಜ್ಜನಿಗೆ ಕರೆ ಮಾಡಿದ್ದಾಗ ನಾಡಿದ್ದು ಆಗಸ್ಟಿನಲ್ಲಿ ಬರಬಹುದೇನೋ ಎಂದಿರಬೇಕು..”.
“ಹಾ.. ಇನ್ನು ೨ ತಿಂಗಳುಗಳು ಮಾತ್ರ ಬಾಕಿ.. ಒಳ್ಳೆದಾಯ್ತು.. ಈಗ ತಂಗಿ …








