ಭಾವಾಂತರಂಗ

ಮುಂಜಾವಿನ ಅರುಣ ರಾಗದ ಹೊತ್ತಲಿ,
ಹನಿ ಮುತ್ತಿಕ್ಕಿದ ಕದವ ತೆರೆದ ಪರಿಯಲಿ,
ಕಣ್ಣಿಗೆ ಕಂಡ ಭಾವವು ಅದೆಂತದೋ ?

ಪಟ-ಪಟನೆ ಆಡಿದ ಮಾತದೆಂತದೋ ?
ಲಗು-ಬಗೆಯಲಿ ಎಲ್ಲ ತೊರೆದು ನಿಂತು,
ದಿಟ್ಟಿಸಿ ನೋಡಿದ ನೋಟವದೆಂತದೋ?

ಸಾಲಂಕೃತ ಜರತಾರಿ ಸೀರೆಯ ಮರೆಯಲಿ,
ತುಟಿಗಳಂಚಿನಲಿ ಕಳೆಕಟ್ಟಿದ ನಸುನಗುವಲಿ
ಮರೆಯಾಗಿ ಕುಳಿತಿದ್ದವು ಮನದ ಭಾವಗಳು!

ಹಿಂದೆ ಸರಿದು ನೋಡಿದರೆ ಕಾಣಸಿಗುತಲಿತ್ತು,…

childhood memory

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – ೧

ಇತ್ತೀಚೆಗೆ ಎಲ್ಲ ಕಡೆಯೂ ಈ ಸೈಕಲ್ ಸವಾರಿಯದೇ ಸುದ್ದಿ. ಅದಕ್ಕೆಂದೇ ಬಹಳಷ್ಟು ತಂಡಗಳನ್ನು ಕಟ್ಟಿಕೊಂಡು ಗುಂಪಾಗಿ ಸೈಕ್ಲಿಂಗ್ ಮಾಡಲು ಬೇರೆ – ಬೇರೆ ಕಡೆ ಹೋಗುವುದೇನು, ಆರೋಗ್ಯ, ಫಿಟ್ನೆಸ್ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ಗಳೆಷ್ಟೋ? ನನಗೆ ಇದು ಯಾವುದರ ಬಗ್ಗೆಯೂ ತಕರಾರಿಲ್ಲ. ಎಲ್ಲರೂ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಮತ್ತು ಇತರರ ಸುರಕ್ಷತೆಯನ್ನು ಕಾಪಾಡಿಕೊಂಡು ಒಂದು ಲಿಮಿಟಿನಲ್ಲಿ …

ಸಂಗಾತಿ

ಬಾಳ ಪಯಣದಿ ಜೊತೆಯಾದ ಜೊತೆಗಾರ
ನಡು ನಿಲ್ದಾಣದಿ ಸೇರಿಕೊಂಡ ಸಹಪ್ರಯಾಣಿಕ
ಮುದದಿ ಕತ್ತಲಡಗಿಸಿ ಬೆಳಕ ಬೀರುವ ನೇಸರ
ನಭದಿ  ತಾರೆಗಳ ಮಧ್ಯೆ ಬಂದು ನಿಂತ ಚಂದ್ರಿಕ.

ಎಲ್ಲೂ ಸಲ್ಲದ ಮೇಲೆ, ಇಲ್ಲದ ನೆಪಗಳಾಚೆಗೆ
ಮೊಗದಿ ಮೇಳೈಸಿದ ಕಳೆಯು ಮಾರ್ದನಿಸಿ ಬತ್ತಿ
ಅಡಿಗಡಿಗೆ ತಲ್ಲಣದಿ ತುರುಬು ಕಟ್ಟಿದ ಪರಿಗೆ
ಪ್ರತಿ ಇಂಚಿಂಚೂ ಹೆಕ್ಕಿ ತೆಗೆದು ನೆನಪಿನ ಬುತ್ತಿ …

ಪಲ್ಲವಿಯ ಅನುದೀಪ

ಬಾನಲಿ ರಂಗೇರಿದೆ ಆಕಾಶ ಬುಟ್ಟಿ
ದೀಪಾವಳಿಯ ಶುಭ ಸಾರುತ ಸುತ್ತಿ-ಸುತ್ತಿ
ನಭದಿ ಮಿರಿ-ಮಿರಿ ಮಿನುಗುತಿಹುದು ನಕ್ಷತ್ರ
ನೆಲದಿ ಮೂಡಿಹುದು ಬಣ್ಣ-ಬಣ್ಣದ ಚಿತ್ರ!

ಒಲವ ಸಾರುವ ನಗು ಅನಿರುದ್ಧನದು
ಪಲ್ಲವಿಸುತಿರಲಿ ಬದುಕಿನ ಪ್ರಣತಿಯದು
ಮನೆಯ ಸಾಲಂಕೃತ ಸಾಲು ಬೆಳಕಿನ ದೀಪ
ಮನದ ಬಾಳ ಬೆಳಗಲಿ ಸದಾ ಅನುದೀಪ!

~ ಸ್ಮಿತಾ ಆಲಂಗಾರ್…

Spread the Digital Awareness – ಡಿಜಿಟಲ್ ಯುಗದ ಒಳಿತು-ಕೆಡುಕು – ಅರಿವು

ದೀಪಾವಳಿ ಹಬ್ಬ ಹತ್ತಿರ ಬರುತ್ತಲಿದೆ. ಎಲ್ಲರೂ ಸಂಭ್ರಮದಿಂದ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡಿರುತ್ತೀರಿ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಸಿಗುವುದು ಮೊಬೈಲ್ ಮೂಲಕ, ಅದೂ ವಾಟ್ಸಪ್ಪ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಇವಳಿಗೆ ಇದರಲ್ಲೂ ನಕಾರಾತ್ಮಕ ಯೋಚನೆಯೇ?; ಅಥವಾ ಏನು ಇವಳ ಪ್ರಾಬ್ಲೆಮ್? ಎಂದು ಬೈಕೊಳ್ಳಬೇಡಿ. ಈ ರೀತಿ ಶುಭಾಶಯ …

jackfruit-palya

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 2 – ಅಜ್ಜಿಯ ಕೈಚಳಕ – ನಳಪಾಕ 

ನೆನಪಿನ ಬುತ್ತಿ

ಮೊನ್ನೆ ಸಂಜೆ ಜೋರಾಗಿ ಮಳೆ ಬರುತ್ತಿತ್ತು. ಆಗ ಮತ್ತೆ ನೆನಪಾಯಿತು ನೋಡಿ, ಅಜ್ಜಿಯ ನಳಪಾಕಗಳು! ಅದರ ರುಚಿ ಅದನ್ನು ಸವಿದವಿರಿಗೇ ಗೊತ್ತು! ಬೇಸಿಗೆ ರಜೆ ಸಾಧಾರಣ ಮೇ ತಿಂಗಳಿನಲ್ಲಿ ಮುಗಿಯುತ್ತ ಬಂದರೂ ನಾವಿನ್ನೂ ಅಜ್ಜಿಮನೆಯಲ್ಲೇ ಠಿಕಾಣಿ ಹೂಡಿರುತ್ತಿದ್ದೆವು ಕೆಲವೊಮ್ಮೆ! ಹಾಗೆಯೆ ಮಾನ್ಸೂನಿನ ಮುನ್ಸೂಚನೆಯಂತೆ ಜೋರಾಗಿ ಮಳೆ ಬರುವಾಗ ಸಾಯಂಕಾಲಕ್ಕೆ ಅಜ್ಜಿ ಮಾಡುವ ಹಲಸಿನ …

rangoon-nightjasmine

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – ೧  ಪಾರಿಜಾತದ ಘಮವೂ, ಲಿಲಿ ಹೂವಿನ ಕಿಲಕಿಲವೂ..,

ಮೊನ್ನೆ ಶೋಭ ದೊಡ್ಡಮ್ಮ ತಮ್ಮ ಮನೆಗೆ ತಂದು ನೆಟ್ಟು ಬೆಳೆಸಿದ ಪಾರಿಜಾತದ ಗಿಡ/ಮರದ ಬಗ್ಗೆ ತಮ್ಮ ಬಾಂಧವ್ಯದ ಭಾವಗಳನ್ನು ಬಿಚ್ಚಿಟ್ಟಾಗ ನನಗೂ ನಮ್ಮ ಅಜ್ಜಿ ಮನೆಯಲ್ಲಿದ್ದ ಪಾರಿಜಾತದ ನೆನಪು ಮತ್ತೆ ಮರುಕಳಿಸಿತು. 

ಪಾರಿಜಾತ … ಅದರ ಘಮ ಅನುಭವಿಸಿದವರಿಗೇ ಗೊತ್ತು. ಅದರ ಹಸಿರ ಹಾಸಿಗೆಯ ಮೇಲೆ ಹರಡಿದ ಶುಭ್ರ ಬಿಳಿಯ ಬಣ್ಣದ ಹೂವುಗಳ ಚೆಂದ ಅಕ್ಷರಗಳಲ್ಲಿ …

ಘಟ್ಟದವಳು

ಘಟ್ಟದವಳು….!

ಘಟ್ಟದವಳು…! ಹೌದು…, ಅವಳು ಘಟ್ಟದವಳೆ. ಒಟ್ಟಿನಲ್ಲಿ ಪಶ್ಚಿಮ ಘಟ್ಟದ ಮೇಲಿನ ಊರು ಅವಳದು! ಅವಳ ಪರಿಚಯ ನಮಗಾಗಿದ್ದು ನಮ್ಮ ಅಣ್ಣನ ಮೂಲಕ! ಅದೊಂದು ದಿನ ನನ್ನ ಅಣ್ಣ ನಾನು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ ಮೊಬೈಲಿಗೆ ಒಂದು ಸಂದೇಶ ಕಳುಹಿಸಿ, ಕರೆ ಮಾಡಿ ಹೇಳಿದನು, “ಇದು ನಿನ್ನ ಅತ್ತಿಗೆಯಾಗುವವಳ ಈಮೇಲ್ ಐಡಿ ಮತ್ತು ಮೊಬೈಲ್ ನಂಬರ್. ಅವಳ …

ಮತ್ತೆ ಬಂದೀತೇ ಶ್ರಾವಣ ?

ಮುಂಗಾರಿನಲಿ ಎಲ್ಲೂ ಸಲ್ಲದ ಮೇಲೆ 
ಸುಮ್ಮನೇತಕೆ ಇಲ್ಲಿ ನೆಲೆ ನಿಲ್ಲುವೆ ?
ಸಾಲದೇ?, ಸೀದುಹೋದ ಕಾತುರತೆಗೆ
ಚಾತಕ ಪಕ್ಷಿಯಂತೆ ನೀ ತಳೆದ ನಿಲುವು ?

ಪರಿ – ಪರಿಯಾಗಿ ಬೇಡಿದರೂ ಸಹ ಸಿಗದ
ಕವಡೆ ಕಾಸಿನ ಕಿಮ್ಮತ್ತು ಸಾಕಾಗಲಿಲ್ಲವೇ ?
ನೀನೇ ಕಟ್ಟಿದ ಹಂಗಿನರಗಿನ ಅರಮನೆಯ ವಾಸ
ಪಕ್ಕನೆ ಮತ್ತೇನನ್ನಾದರೂ ನುಡಿಯಿತೇ ಶಕುನದ ಹಕ್ಕಿ ? …

ಮಳೆಯು ಮಾತನಾಡುತ್ತಿದೆ ..!

ತಂಗಾಳಿ ಬೀಸಿ ತಂದ ಇಂಪಾದ ಇಂಚರ 

ಮುತ್ತಿನ ತೋರಣದ ರಮ್ಯ ಚಿತ್ರಾಲಂಕಾರ

ನದಿ-ವನಗಳ ನಡುವಿನ ಹನಿ ನೀರಿನ ಝಳ-ಝಳ

ಕೋಲ್ಮಿಂಚಿನ ಕಿರಣಗಳ ಮೀರಿಹ ಸ್ವಾತಿ ಮುತ್ತಿನ ಫಳ-ಫಳ !

ಸಾಲಂಕೃತ ಧರೆಯ ವಿಹಂಗಮ ಚಿತ್ರಣ 

ತಣಿಸಿಹುದು ಭುವಿಯ ಭೀಕರ ತಲ್ಲಣ 

ಸುಮಧುರ ದುಂಬಿಗಳ ನಾದ ಝೇಂಕಾರ 

ಮುನಿಸ ತೋರಿಪ ವಿನೂತನ ಬಗೆಯ ಸಾಕಾರ!

ಪ್ರಕೃತಿ ಕರೆದೊಯ್ಯುವುದು ಒಡಲೊಳು ಬಹುದೂರ ತೀರ 

ಮಾರ್ದನಿಸಲು ಕ್ಷಣ-ಕ್ಷಣಗಳ ಭಾವ ಸಾಕ್ಷಾತ್ಕಾರ

ಸ್ಪರ್ಶ ಸೊಂಪಾದ ತಂಗಾಳಿಯು ಬೀಸುತಲಿದೆ

ಮತ್ತೆ – ಮತ್ತೆ ಮಳೆಯು ಮಾತಾಡುತ್ತಿದೆ !

– ಸ್ಮಿತಾ ಆಲಂಗಾರ್ …

ಕ್ಷಮಿಸಿ, ನಿಮ್ಮ ಜಯನಗರ ಈಗ ಮೊದಲಿನಂತಿಲ್ಲ 

ಭಾನುವಾರ..! ಭಾನುವಾರ ಬಂತೆದರೆ ಸುತ್ತಾಡಿಕೊಂಡು ಸಮಯ ವ್ಯರ್ಥ ಮಾಡುವವರೆಂದೇ ಪ್ರ(ಕು)ಖ್ಯಾತಿ ಪಡೆದಿರುವ ಬೆಂಗಳೂರಿಗರು ನಾವು! ಈ ಹೆಸರಿಗೆ ಧಕ್ಕೆ ತಂದು; ಹೀಗೆಂದು ಭಾವಿಸುವ ದೊಡ್ಡ ಮಟ್ಟಿನ ಜನಸಮೂಹವನ್ನು ನೋವಿನ ಕೂಪಕ್ಕೆ ತಳ್ಳಿದ ಪಾಪ ನಮಗೆ ಅಂಟಬಾರದೆಂದು ಧೃಢ ಸಂಕಲ್ಪಗೈದು ನಾವು ಕಳೆದ ಭಾನುವಾರ ಜಯನಗರದತ್ತ ಹೊರಟೆವು! 

ಮಧ್ಯಾಹ್ನ ಊಟದ ಹೊತ್ತಿನವರೆಗೂ ಸೂರ್ಯನೇ ಊಟಕ್ಕೆಂದು ಭುವಿಗಿಳಿದು ಬಂದಿದ್ದನೇನೋ …

Manassakshi

ಮನಸ್ಸಾಕ್ಷಿ

ಭಾಗ – ೧

ಗಂಟೆ ಬೆಳಗಿನ ಒಂಭತ್ತಾದರೂ ಏಳದ ಸಾಕ್ಷಿಯನ್ನು ನೋಡಿದ ರತ್ನಮ್ಮನ ಮುಖ ಚಿಂತಾಕ್ರಾಂತವಾಯಿತು. ” ಸಾಕ್ಷಿ ಎದ್ದೇಳು ಬೇಗ. ಸೂರ್ಯ ನೆತ್ತಿ ಮೇಲೆ ಬಂದಾಯ್ತು”. ಹಾಂ ಇಲ್ಲ.. ಹೂಂ ಇಲ್ಲ. ಏನಾಗಿದೆ ಇವಳಿಗೆ ಎಂದುಕೊಂಡೇ ತಿಂಡಿ ತಿನ್ನತೊಡಗಿದರು. ಮನಸ್ಸು ತಂತಾನೆ ೩೨ ವರ್ಷಗಳಷ್ಟು ಹಿಂದಕ್ಕೋಡಿತು.

            …

Happy Women’s Day!

Celebrate Yourself ….

BE YOU. YOU ARE, WHAT YOU ARE. ENJOY BEING YOU AND BE YOURSELF.

Everyday is your day. Be kind and follow your passion. Be happy and cherish every moment. Don’t dwell into imaginary world and create a …

Meluku

ಮೆಲುಕು Meluku

ಮೊನ್ನೆ ಅಷ್ಟಮಿಯ ಸಮಯ. ಊರಿಗೆ ಹೋಗಿದ್ದೆವು. ಮತಾಡ್ತ ಮತಾಡ್ತ ಅದು ಇದು ಎಂದು ಕೊನೆಗೆ ಹೊತ್ತು ಹೋಗಿದ್ದೆ ಗೊತ್ತಾಗಿಲ್ಲ! ದೊಡ್ಡಮ್ಮ ಚಾ ಕುಡಿದು ತಿಂಡಿ ತಿಂದು ಹೋಗಿ ಅಂದಾಗ ಒಪ್ಪಲೆ ಬೇಕಾಯ್ತು. ಸರಿ. ಈನ್ನೇನು ಚಹಾದ ಸಮಯವೆ. ಇಲ್ಲೆ ಕುಡಿದು ಹೊರಟರಾಯ್ತು ಅಂದುಕೊಂಡು ಕೂತೆ. ಚಹಾ ತಯಾರಾದ ಕೂಡಲೆ ದೊಡ್ಡಮ್ಮನ ಹೇಳಿಕೆಗೂ ಕಾಯದೆ …

Enable Notification OK No thanks