ಮುಂಗಾರಿನ ಮೌನರಾಗ – ಭಾಗ – 3
ಮನೆಗೆ ಬಂದವಳೇ ಸಾರಿಕಾ ತರಕಾರಿ ಚೀಲದಿಂದ ತರಕಾರಿಗಳನ್ನೆಲ್ಲ ತೆಗೆದು ತೊಳೆಯಲು ಒಂದು ಪಾತ್ರೆಯಲ್ಲಿ ಹಾಕಿದಳು. ನಂತರ ನೇರವಾಗಿ ಕೈ ಕಾಲು ಮುಖ ತೊಳೆದುಕೊಂಡು, ಬಟ್ಟೆ ಬದಲಿಸಿ, ತರಕಾರಿ ತೊಳೆಯುವುದರಲ್ಲಿ ನಿರತಳಾದಳು.
“ಇದೇನಿದು? ಒಳ್ಳೆ ನಾರ್ತ್ ಇಂಡಿಯನ್ಸ್ ತರಹ ಬರೀ ಈರುಳ್ಳಿ, ಆಲೂಗಡ್ಡೆ, ಟೊಮೇಟೊ, ಮೂಲಂಗಿ ಮತ್ತೆ ಬೆಂಡೆಕಾಯಿ ತಂದಿದೀಯ? ಕನಿಷ್ಠ ಪಕ್ಷ ಚೀನೀಕಾಯಿನೋ, ಅಥವಾ ಸೌತೇನೋ …

