ವಿಶ್ವ – ವಿಶಾಲು ಅಂತರಂಗ
ವಿಶ್ವ: “ಲೇ.. ವಿಶಾಲೂ.. ಎಲ್ಲಿದೀಯ? ಬೇಗ ಬಾ..”.
ವಿಶಾಲು: “ಬಂದೆ ರೀ.. ಒಂದು ನಿಮಿಷ…”.
ಸ್ವಗತ (ವಿಶ್ವ) : “ಒಂದು ನಿಮಿಷ ಅಂತೇ.. ಒಂದು ನಿಮಿಷ.. ಇವಳ ಒಂದು ನಿಮಿಷ ಅಂದ್ರೆ ಇನ್ನೊಂದು ಅರ್ಧ ಗಂಟೆಗೆ ಪತ್ತೆಯಾಗೋಲ್ಲ ಇವಳು.. ಎಲ್ಲ ನನ್ನ ಕರ್ಮ!”.
ಸ್ವಗತ (ವಿಶಾಲು): “ಅದೇನು ಬೆಳಗ್ಗೆ ಬೆಳಗ್ಗೆ ೫ ನಿಮಿಷಕ್ಕೊಮ್ಮೆ ಇವರ ಬಳಿ …

