ಮುಂಗಾರಿನ ಮೌನರಾಗ – ಭಾಗ – 6
“ಹಲೋ ಸರ್, ಗುಡ್ ಡೇ”, ಹೇಳಿದಳು ಸಾರಿಕಾ ರಜತನ ನೋಡಿ, ಸುಧಾರಿಸಿಕೊಂಡು!
“ಹಲೋ ಮಿಸ್ ಸಾರಿಕಾ, ವೆಲ್ಕಮ್. ತುಂಬಾ ಬೇಗ ಬಂದಿದ್ದೀರಿ ತಾವು. ನಿಮ್ಮ ಕೋರಿಕೆಯಂತೆ ಪರಸ್ಪರ ಪರಿಚಯದ ಕಾರ್ಯಕ್ರಮ ಆಲ್ರೆಡಿ ಮುಕ್ತಾಯವಾಯಿತು. ರಿಪೋರ್ಟಿಂಗ್ ಸಮಯ ೧೦:೩೦ ಎಂದು ಇತ್ತಪ್ಪ ನಾವು ಕಳುಹಿಸಿದ ಸುತ್ತೋಲೆಯಲ್ಲಿ. ನಿಮಗೆ ಅದೂ ಸರಿಹೋಗಿಲ್ಲವೇನೋ? ಹೇಳಿ ಮ್ಯಾಡಮ್, ಯಾವ ರೀತಿ ಸೇವೆ …

