ಭಾವಗಳ ಭಾರಕ್ಕೆ ಬೇರಾಗಿದೆ ಬಿಗುಮಾನ,
ಮನವ ಸಂತೈಸಬೇಕಿದೆ ನೀನೀ ದಿನ.
ಅರಸುತಿವೆ ಕಣ್ಗಳು ನಾ ಮೆಚ್ಚಿದ ಜೊತೆಗೆ,
ಬಯಸುತಿದೆ ಮನ ಬೆಚ್ಚನೆಯ ಅಪ್ಪುಗೆ.
ದೂರದ ತೀರದಲ್ಲೆಲ್ಲೋ ಹುಡುಕಿದೆ ನಾ,
ಕಳೆದು ಹೋದ ಅಮೂಲ್ಯ ಘಳಿಗೆಗಾಗಿ.
ಬಂದು ನೋಡಿದೆನಿಲ್ಲಿ ತಿರು-ತಿರುಗಿ ನಾ,
ಸಮಯವು ಉರುಳುತಿದೆ ವರುಷಗಳಾಗಿ.
ಅರಸಿದೆ ಮನವಿಂದು ನಿನ್ನಾ ಅಭಿಮಾನ,
ಭಾವನೆಗಳ ಚೆಲ್ಲಾಟದಿ ಬರಿದಾಗಿದೆ ಈ ಮನ.
ಈ ಋತುವಿನ ಈ ಮಕರ ಸಂಕ್ರಾಂತಿ,
ಹರಡಲಿ ಎಲ್ಲೆಡೆ ಭಾವಾನುರಾಗದ ಕ್ರಾಂತಿ!
