Ingredients:
- Medium size – Ripened Mangoes – 2
- Honey – 1 table spoon
- Butter – 1 table spoon
- Coconut Vinegar – 1/4 tea spoon
- Coffee decoction- 1 tea spoon
- Instant Coffee Powder – 1/4 tea spoon
- Choice of your bread slices (wheat/sandwich/milk) – 4
- Salt – very small pinch
Method:
- Cut the mangoes into small dice pieces and put it into a mixing bowl.
- Add honey, coconut vinegar and 1/4 tea spoon of the butter, coffee decoction, coffee powder and stir well with spoon and slightly mash it.
- Do not use any masher as it will make the mix too thick liquid.
- Heat the tawa (Or dosa pan) and roast 2 slices of bread slightly by adding butter.
- Once done, top one slice with the prepared mango mixture. Toast slightly and press the other slice on top with a spatula or your palm.
- Toast both the sides slowly, and transfer to the plate.
- Enjoy your sandwich!
- You can skip ingredients # 4, 5 and 6 if you wish.
- You can substitute butter with ghee.
ಕನ್ನಡದಲ್ಲಿ –
ಬೇಕಾಗುವ ಸಾಮಗ್ರಿಗಳು:
- ಮಧ್ಯಮ ಗಾತ್ರದ ಮಾವಿನ ಹಣ್ಣು – ೨
- ಜೇನುತುಪ್ಪ – ೧ ಟೇಬಲ್ ಚಮಚ
- ಬೆಣ್ಣೆ – ೧ ಟೇಬಲ್ ಚಮಚ
- ತೆಂಗಿನ ವಿನೇಗರ್ – ೧/೪ ಟೀ ಚಮಚ
- ಕಾಫಿ ಡಿಕಾಕ್ಷನ್ – ೧/೪ ಟೀ ಚಮಚ
- ಇನ್ಸ್ಟಾಂಟ್ ಕಾಫಿ ಪುಡಿ – ೧/೪ ಟೀ ಚಮಚ
- ನಿಮ್ಮ ಇಷ್ಟದ ಬ್ರೆಡ್ ಸ್ಲೈಸ್ – ೪
- ಉಪ್ಪು – ಚೂರು – ೧-೨ ಕ್ರಿಸ್ಟಲ್
ವಿಧಾನ:
- ಮಾವಿನ ಹಣ್ಣನ್ನು ಸಣ್ಣಕೆ ಹೆಚ್ಚಿ ಒಂದು ಮಿಶ್ರಣ ಮಾಡುವ ಪಾತ್ರೆಗೆ ಹಾಕಿಕೊಳ್ಳಿ.
- ಜೇನು ತುಪ್ಪ, ವಿನೇಗರ್, ೧/೪ ಟೀ ಚಮಚ ಬೆಣ್ಣೆ, ಕಾಫಿ ಡಿಕಾಕ್ಷನ್, ಕಾಫಿ ಹುಡಿ – ಎಲ್ಲವನ್ನೂ ಮಾವಿನ ಹಣ್ಣಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
- ಮೆದುವಾಗಿ ಚಮಚದಲ್ಲಿ ಕಲಸಿಕೊಳ್ಳಿ.
- ಕಾವಲಿ ಬಿಸಿಗಿಟ್ಟು, ಬ್ರೆಡ್ಡಿನ ಎರಡೂ ಬದಿಯನ್ನು ಹದವಾಗಿ ಬೆಣ್ಣೆ ಹಚ್ಚಿ ಬಿಸಿ ಮಾಡಿಕೊಳ್ಳಿ.
- ನಂತರ ಒಂದು ಸ್ಲೈಸಿನ ಮೇಲೆ ತಯಾರಿಸಿಟ್ಟ ಮಾವಿನ ಮಿಶ್ರಣವನ್ನು ಹರಡಿ.
- ಇನ್ನೊಂದು ಸ್ಲೈಸನ್ನು ಇದರ ಮೇಲಿಟ್ಟು ಮೆತ್ತಗೆ ಕೈಯಿಂದ ಅಥವಾ ಸಣ್ಣ ಸೌಟಿನಿಂದ ಒತ್ತಿ.
- ಎರಡೂ ಬದಿಯನ್ನು ಹದವಾಗಿ ಟೋಸ್ಟ್ ಮಾಡಿಕೊಂಡು (ಮಗುಚುವುದು ಕಷ್ಟಕರ ಎನಿಸಿದರೆ ಒಂದು ಬದಿ ಮಾತ್ರವೇ ಟೋಸ್ಟ್ ಮಾಡಿಕೊಳ್ಳಿ, ಮಿಶ್ರಣ ಹೊರಬರುವ ಚಿಂತೆಯಿರುವುದಿಲ್ಲ, ಆಗಲೇ ಎರಡೂ ಬದಿಯನ್ನು ಮಿಶ್ರಣ ಹಾಕುವ ಮೊದಲೇ ಹದವಾಗಿ ಬಿಸಿ ಮಾಡಿಕೊಂಡದ್ದಾಗಿದೆ!), ತಟ್ಟೆಯಲ್ಲಿ ಹಾಕಿಕೊಳ್ಳಿ.
- ನಿಮ್ಮಿಷ್ಟದಂತೆ ತಿನಿಸನ್ನು ತಿಂದು ಆನಂದಿಸಿ!
- ಬೆಣ್ಣೆ ಇಲ್ಲದಿದ್ದರೆ ತುಪ್ಪವನ್ನೂ ಉಪಯೊಗಿಸಬಹುದು.
- # 4, 5 ಮತ್ತು 6ನೇ ಸಾಮಗ್ರಿಗಳು ಇಲ್ಲದೆಯೂ, ಉಳಿದ ಸಾಮಗ್ರಿಗಳಿಂದಲೂ ಈ ತಿನಿಸು ತಯಾರಿಸಬಹುದು.
- ಪ್ರತಿಯೊಂದು ಹಂತದಲ್ಲೂ ಕಾವಲಿ ಮಧ್ಯಮ ಉರಿಯಲ್ಲಿರಲಿ.



