ವಿಷು ಕಣಿ

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 5

ವಿಷು ವಿಶೇಷ

ಅಮ್ಮ: “ಹೌದು.. ಮೊದಲೆಲ್ಲ ಎಷ್ಟು ಗೌಜಿ ವಿಷುವಿನ ದಿನ”.

ಅಮ್ಮ: “ಹಾಗೇ ..ಈ ವಿಷು ಬಂದಾಗ ದೊಡ್ಡಪ್ಪನ ನೆನಪಾಗುತ್ತದೆ. ಎಲ್ಲರಿಗೂ ನಿತ್ಯಕ್ಕೆ ಉಡಲು ಹೊಸ ವಾಯಿಲ್ ಸೀರೆ ತರುತ್ತಿದ್ದರು ದೊಡ್ಡಪ್ಪ ಆಗ.. “.

ನಾನು: “ಹಾಂ.. ನನಗಿನ್ನೂ ನೆನಪಿದೆ.. ನಾವಷ್ಟೇ ಅಲ್ಲದೇ, ಕೆಲಸದವರೂ ಸಹ ಏನಾದರೊಂದು ಹೊಸ ಬೆಳೆ ತಂದು ಕೊಟ್ಟು, ಅಜ್ಜನ …

ಕೆನೆಗಟ್ಟಿದ ಚಹಾ

ಬಾನಲಿ ಮೂಡಿದ ಹುಣ್ಣಿಮೆ ಚಂದಿರ
ನೆಲವಿಡೀ ಚೆಲ್ಲಿದ್ದ ಶುಭ್ರ ಬೆಳದಿಂಗಳ
ಕೋಲ್ಮಿಂಚಿನ ಸದ್ದಿಗೆ ಮಿಡಿದ ಮನ
ಹೊರಟಿತ್ತು ಪಯಣ ಹೊರಾಂಗಣದತ್ತ !

ಮೇಜಿನ ಎದುರು ಬದುರಾಗಿ ಕುಳಿತಿದ್ದರೂ
ಇವಳ ನೋಟ ಅವನತ್ತ ನೆಟ್ಟಿತ್ತು, ಆದರೆ
ಅವನ ದೃಷ್ಟಿ ಜಂಗಮವಾಣಿ ಹಿಡಿದಿಟ್ಟಿತ್ತು!
ನೊರೆಯ ಚಹಾ ಮಾತ್ರ ಹೇಳದೇ ಕೆನೆಗಟ್ಟಿತ್ತು

ಇನ್ನೇನು ಧಾರೆಯಾಗಿ ಧರೆಗಿಳಿಯಬೇಕಿತ್ತು
ತುಂತುರು ಹನಿ ಮಳೆ, …

Charmadi Ghat

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 4 – II

ಕಂಡರಿಯದ ಕಡೂರಿನ ಮೊದಲ ಪಯಣ 

ಅಂತೂ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಮಿಸಿ ಚಹಾದ ಹೊತ್ತಿಗೆ ಎಲ್ಲರಿಗೂ ಈ ಗಡಸು ನೀರಿನ ಸಹವಾಸ ಸಾಕೆನಿಸಿತ್ತು. ಆದರೆ, ಬೇರೆ ದಾರಿಯಿಲ್ಲದೆ ಅಕ್ಕ – ಬಾವನಿಗೆ ಬೇಜಾರಾಗಬಾರದೆಂದು ಸುಮ್ಮನಿದ್ದೆವು. ಹಾಗೆಯೇ ನಾವೆಲ್ಲ ಸುಮಾರಷ್ಟು ಮುಖವಾಡ ಧರಿಸಿ, ನಗುತ್ತ, ಕಣ್ಣುಮುಚ್ಚಿಕೊಂಡು ಒಂದೇ ಗುಟುಕಿಗೆ ನೀರು ಕುಡಿಯುವ ಅವಸ್ಥೆ ನೋಡಿ, ನಮ್ಮ …

Charmadi Ghat

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 4

ಕಂಡರಿಯದ ಕಡೂರಿನ ಮೊದಲ ಪಯಣ 

ಅದು ಬೇಸಿಗೆಯ ರಜವೋ, ಮಧ್ಯಾವಧಿಯ ರಜವೋ ಎಂದು ನನಗೆ ಸರಿಯಾಗಿ ನೆನಪಿಲ್ಲ. ಬಹುಶಃ ಅದು ಬೇಸಿಗೆ ರಜ. ಇರಲಿ ಬಿಡಿ. ಈಗ ವಿಷಯಕ್ಕೆ ಬರೋಣ. ಇದು ನಮ್ಮ ಮೊದಲ ಕಡೂರು ಪ್ರಯಾಣದ ಕಥೆ! ಮೊದಲ ಬಾರಿಗೆ ನಾವೆಲ್ಲ ಆ ಊರು ನೋಡಲು ಹೊರಟಿದ್ದೆವು. ಅದಕ್ಕೆ ಕಾರಣ ನಮ್ಮ ಅಕ್ಕನ ಮದುವೆಯಾಗಿ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 12

ಆಸ್ಪತ್ರೆಯಲ್ಲಿ ಸುಸಜ್ಜಿತ ಕೋಣೆಯೊಳಗೆ ಕಾಲಿಡುತ್ತಲೇ, ಹಾಸಿಗೆ ಮೇಲೆ ಮಲಗಿದ್ದವನ ಮುಖ ನೋಡಿ ಬೆಚ್ಚಿಬಿದ್ದಳು ಸಾರಿಕಾ! ಅಯ್ಯೋ, ಎಲ್ಲಿ ಬಂದು ಸಿಕ್ಕಿಹಾಕಿಕೊಂಡೆನು ತಾನು? ಯಾಕಾದರೂ ಇಳಿದು ಮುಂದೆ ಹೋಗಬೇಕಾದವಳು ಮತ್ತೆ ಈ ಹುಡುಗಿಯ ಮಾತನ್ನು ಕೇಳಿ ಬಂದೆನೋ? ಯಾಕಾದರೂ ಇಂದು ಮನೆಯಿಂದ ಹೊರಗಡೆ ಹೊರಟೆನೋ? ಹೀಗೆ ಮನದಲ್ಲೇ ಮಂಡಿಗೆ ತಿನ್ನುತ್ತಾ, ಕಾಲಿನ ಹೆಬ್ಬರಳಲ್ಲಿ ನೆಲದ ಮೇಲೆ ರಂಗೋಲಿ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 9

ಸಾರಿಕಾಳೇನೋ ಆರಾಮವಾಗಿ ನಿದ್ದೆ ಮಾಡಿದಳು. ತಲೆ ಚಚ್ಚಿಕೊಳ್ಳುವಂತಾಗಿದ್ದು ಸುಮಂಗಲರಿಗೆ! ಈಗ ಏನು ಹೇಳುವುದು ಹುಡುಗನ ಕಡೆಯವರಿಗೆ? ಅವರು ಏನಂದುಕೊಂಡಾರು ನಮ್ಮ ಬಗ್ಗೆ? ಅದಕ್ಕಿಂತ ಮೊದಲು ಗಂಡನಿಗೆ ಏನು ಹೇಳುವುದು? ನನ್ನ ಒತ್ತಾಯಕ್ಕೆ ಮಣಿದು, ಅವಳ ಸ್ವಭಾವ ಗೊತ್ತಿದ್ದರೂ ಕೊನೆಗೂ ಅವರವಿರಲ್ಲಿ ವಿಚಾರಿಸಿ, ಏನೋ ಒಂದು ಸಂಬಂಧ ಕೂಡಿ ಬರುವಂತಾಗಿತ್ತು. ಈಗ ನೋಡಿದರೆ ಹೀಗೆ ಹೇಳುತ್ತಿದ್ದಾಳೆ.

ಅದೇನಾದರೂ …

airmail

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 5 – ಅಮೆರಿಕಾದ ಪಾರಿವಾಳದ ಸಂದೇಶ

ಅಮೆರಿಕಾದ ಪಾರಿವಾಳದ ಸಂದೇಶ

ಹೆಸರಿನ ಹುಡುಕಾಟ…

ಅಮ್ಮ, ಚಿಕ್ಕಿ, ತಂಗಿ ಎಲ್ಲರ ತಲೆ ತಿಂದರೂ ಆ ಒಂದು ಪತ್ರದ ಹೆಸರೇನೆಂದು ಸರಿಯಾಗಿ ಗೊತ್ತಾಗಲಿಲ್ಲ. ಅದು ಆಂಗ್ಲ ಭಾಷೆಯಲ್ಲಿ ‘ಏರ್ ಮೇಲ್ ‘ಎಂದೂ, ಹಿಂದಿಯಲ್ಲಿ ‘ಹವಾಯ್ ಪತ್ರ್’ ಎಂದೂ ಕರೆಯಲ್ಪಡುವುದೆಂದು ಗೂಗಲ್ ಮಹಾಶಯ ಎಷ್ಟು ಹೇಳಿದರೂ, ಅದು ನಾನಂದು ಆ ಪತ್ರ ಪೋಸ್ಟ್ ಆಫೀಸಿನಿಂದ ಹಾಗೆ ಹೇಳಿ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 8

“ಈಗ ಹೇಳು, ಏನು ವಿಷಯಾಂತ? ಐಸ್ ಕ್ರೀಮ್ ತಿಂದದ್ದಾಯಿತಲ್ಲ?”, ಕೇಳಿದರು ಸುಮಂಗಲ.

“ಏನಿಲ್ಲ, ನಮ್ಮ ಆಫೀಸಿನಲ್ಲಿ ಡ್ರೆಸ್ ಕೋಡ್ ಡಿಸೈನ್ ಮಾಡಲು ಅವಕಾಶ ಸಿಕ್ಕಿತ್ತು. ನಾನು ಮಾಡಿದ್ದು ಆಯ್ಕೆಯಾಯಿತು ಕೊನೆಗೂ. ವೋಟಿಂಗ್ ಎಲ್ಲ ನಡೀತು. ಆದರೆ ನಿಜವಾಗಲೂ ಎಲ್ಲರಿಗೂ ನನ್ನ ಡಿಸೈನ್ ಈ ಮಾಡೆರ್ನ್ ಕಾಲದಲ್ಲಿ ಇಷ್ಟ ಆಗಿದ್ದು ಆಶ್ಚರ್ಯದ ಜೊತೆ, ಖುಷಿಯೂ ಆಯಿತು. ಅದಕ್ಕೆ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 7

ಮನೆಗೆ ಬಂದವಳೇ ಸಾರಿಕಾ ಎಲ್ಲರನ್ನೂ ಕರೆದು ಹೇಳಿದಳು, “ಬೇಗ ಬನ್ನಿ, ಐಸ್ ಕ್ರೀಮ್ ಕರಗಿಹೋಗುತ್ತದೆ. ಈಗಲೇ ತಿಂದರೆ ಅದರ ಮಜವೇ ಬೇರೆ. ಫ್ರಿಡ್ಜ್ನಲ್ಲಿ ಇಟ್ಟು ಮತ್ತೆ ತಿಂದರೆ ಇದಕ್ಕೆ ಆ ಸ್ವಾದವಿರುವುದಿಲ್ಲ. ಅಮ್ಮಾ .. ಎಲ್ಲಿದೀಯ? ಬೇಗ ಬಾ”.

ಹಿತ್ತಿಲ ಗಿಡದಲ್ಲಿ ಮಲ್ಲಿಗೆ ಕುಯ್ಯುತ್ತಿದ್ದ ಸುಮಂಗಲ ಕೈ ತೊಳೆದು, ಸೆರಗಿನಲ್ಲಿ ಕೈ ಒರೆಸಿಕೊಳ್ಳುತ್ತಾ ಗಡಿಬಿಡಿಯಲ್ಲಿ ಸಾರಿಕಾಳ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 6

“ಹಲೋ ಸರ್, ಗುಡ್ ಡೇ”, ಹೇಳಿದಳು ಸಾರಿಕಾ ರಜತನ ನೋಡಿ, ಸುಧಾರಿಸಿಕೊಂಡು!

“ಹಲೋ ಮಿಸ್ ಸಾರಿಕಾ, ವೆಲ್ಕಮ್. ತುಂಬಾ ಬೇಗ ಬಂದಿದ್ದೀರಿ ತಾವು. ನಿಮ್ಮ ಕೋರಿಕೆಯಂತೆ ಪರಸ್ಪರ ಪರಿಚಯದ ಕಾರ್ಯಕ್ರಮ ಆಲ್ರೆಡಿ ಮುಕ್ತಾಯವಾಯಿತು. ರಿಪೋರ್ಟಿಂಗ್ ಸಮಯ ೧೦:೩೦ ಎಂದು ಇತ್ತಪ್ಪ ನಾವು ಕಳುಹಿಸಿದ ಸುತ್ತೋಲೆಯಲ್ಲಿ. ನಿಮಗೆ ಅದೂ ಸರಿಹೋಗಿಲ್ಲವೇನೋ? ಹೇಳಿ ಮ್ಯಾಡಮ್, ಯಾವ ರೀತಿ ಸೇವೆ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 5

ಅದೊಂದು ಭಾನುವಾರ ರಜತ್ ಬಹಳ ಖುಷಿಯಾಗಿದ್ದನು. ಬೆಳಗ್ಗೆ ಬೇಗನೆ ಎದ್ದು ಎಲ್ಲೋ ಹೊರಡಲು ತಯಾರಾಗಿದ್ದನ್ನು ಕಂಡು ರಮ ಕೇಳಿದರು, “ಏನೋ? ಭಾನುವಾರ ಇಷ್ಟು ಬೇಗ ಯಾವ ಕಡೆ ಹೊರಟೆ? ತಿಂಡಿ ಬೇಡವಾ?”.

“ಬೇಡಮ್ಮ. ಇವತ್ತು ತುಂಬಾ ಮುಖ್ಯವಾದ ಕೆಲಸವಿದೆ. ಆದಷ್ಟು ಬೇಗ ರಾಯಲ್ ಲಿಲಿಸ್ ಹೋಟೆಲಿಗೆ ಹೋಗಬೇಕು. ಕೆಲವೊಂದು ವ್ಯವಸ್ಥೆಗಳನ್ನು ನಾನೇ ಖುದ್ದು ನಿಂತು ನೋಡಿಕೊಳ್ಳಬೇಕು. …

mungarina-mounaraga

ಮುಂಗಾರಿನ ಮೌನರಾಗ – ಭಾಗ – 4

“ಓಹ್ ಹಲೋ, ಯಾರೊಂದಿಗೆ ಮಾತನಾಡುತ್ತಿದ್ದೀರಾ ಎಂದಾದರೂ ಗೊತ್ತಿದೆಯಾ ನಿಮಗೆ? ಏನು ಹೇಳುತ್ತಿದ್ದೀರಿ ನೀವು ನಿಮ್ಮ ಬಾಸ್ಗೆ? ಸುಮ್ಮನೇ ಕಿರಿಕಿರಿ ಮಾಡಿದರೆ, ಮನೆಗೆ ಕಳುಹಿಸಬೇಕಾಗುತ್ತದೆ ನೋಡಿ. ನಮ್ಮಲ್ಲಿ ಕೆಲಸ ಮಾಡುವವರೆಲ್ಲ ನಮ್ಮ ಸಂಸ್ಥೆಯ ಬಗ್ಗೆ, ಅದರ ಮಾಲೀಕರ ಬಗ್ಗೆ ತಿಳಿದುಕೊಂಡಿದ್ದರೆ ಕಂಪನಿಗೆ ಅದರಿಂದ ಒಳ್ಳೆಯದು. ನಿಮಗೆ ನೋಡಿದರೆ ಸಂಸ್ಥೆಯ ಎಬಿಸಿಡಿ ಗೊತ್ತಿದ್ದ ಹಾಗಿಲ್ಲ. ಅದೇನು ಕೆಲಸ ಮಾಡುತ್ತೀರೋ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 3

ಮನೆಗೆ ಬಂದವಳೇ ಸಾರಿಕಾ ತರಕಾರಿ ಚೀಲದಿಂದ ತರಕಾರಿಗಳನ್ನೆಲ್ಲ ತೆಗೆದು ತೊಳೆಯಲು ಒಂದು ಪಾತ್ರೆಯಲ್ಲಿ ಹಾಕಿದಳು. ನಂತರ ನೇರವಾಗಿ ಕೈ ಕಾಲು ಮುಖ ತೊಳೆದುಕೊಂಡು, ಬಟ್ಟೆ ಬದಲಿಸಿ, ತರಕಾರಿ ತೊಳೆಯುವುದರಲ್ಲಿ ನಿರತಳಾದಳು.

“ಇದೇನಿದು? ಒಳ್ಳೆ ನಾರ್ತ್ ಇಂಡಿಯನ್ಸ್ ತರಹ ಬರೀ ಈರುಳ್ಳಿ, ಆಲೂಗಡ್ಡೆ, ಟೊಮೇಟೊ, ಮೂಲಂಗಿ ಮತ್ತೆ ಬೆಂಡೆಕಾಯಿ ತಂದಿದೀಯ? ಕನಿಷ್ಠ ಪಕ್ಷ ಚೀನೀಕಾಯಿನೋ, ಅಥವಾ ಸೌತೇನೋ …

mungarina-mounaraga

ಮುಂಗಾರಿನ ಮೌನರಾಗ – ಭಾಗ – 2

ಆಟೋದವನಿಗೆ ವಿಳಾಸ ಹೇಳಿ, ಸಾರಿಕಾ ಸಂದರ್ಶನದ ಸ್ಥಳ ತಲುಪಿದಾಗ ಅದಾಗಲೇ ಸಮಯ ೧೦ ಕಳೆದಿತ್ತು. ಸಂದರ್ಶನಕ್ಕೆ ರಿಪೋರ್ಟಿಂಗ್ ಟೈಮ್ ೯:೩೦ ಎಂದಿತ್ತು ಪತ್ರದಲ್ಲಿ. ಎಷ್ಟಾದರೂ ಇದು ಭಾರತ. ಇಲ್ಲಿ ಅದೂ – ಇದೂ ನೆಪ ಹೇಳಿಯಾದರೂ ಸಮಯಕ್ಕೆ ಸರಿಯಾಗಿ ತಲುಪದೇ ಇದ್ದರೂ ಮುಂದಿನದು ಹೇಗೋ ನಡೆಯುತ್ತದೆಂಬ ಭಂಡ ಧೈರ್ಯದಿಂದ, ಆಟೋ ಬಾಡಿಗೆ ಕೊಟ್ಟು ಕಳುಹಿಸಿ, ಆತ್ಮವಿಶ್ವಾಸದಿಂದ …

vishwa-vishalu-antaranga

ವಿಶ್ವ – ವಿಶಾಲು ಅಂತರಂಗ

ವಿಶ್ವ: “ಲೇ.. ವಿಶಾಲೂ.. ಎಲ್ಲಿದೀಯ? ಬೇಗ ಬಾ..”.

ವಿಶಾಲು: “ಬಂದೆ ರೀ.. ಒಂದು ನಿಮಿಷ…”.

ಸ್ವಗತ (ವಿಶ್ವ) : “ಒಂದು ನಿಮಿಷ ಅಂತೇ.. ಒಂದು ನಿಮಿಷ.. ಇವಳ ಒಂದು ನಿಮಿಷ ಅಂದ್ರೆ ಇನ್ನೊಂದು ಅರ್ಧ ಗಂಟೆಗೆ ಪತ್ತೆಯಾಗೋಲ್ಲ ಇವಳು.. ಎಲ್ಲ ನನ್ನ ಕರ್ಮ!”.

ಸ್ವಗತ (ವಿಶಾಲು): “ಅದೇನು ಬೆಳಗ್ಗೆ ಬೆಳಗ್ಗೆ ೫ ನಿಮಿಷಕ್ಕೊಮ್ಮೆ ಇವರ ಬಳಿ …

mungarina-mounaraga

ಮುಂಗಾರಿನ ಮೌನರಾಗ – ಭಾಗ – ೧

ಆಗರ್ಭ ಶ್ರೀಮಂತ ಮನೆತನದ, ಸುಂದರ, ಮುಂಗೋಪಿ ಹುಡುಗನೊಂದಿಗೆ, ಸಣ್ಣ ಪೇಟೆಯ, ಸಾಧಾರಣ ಮನೆತನದ ಸಿಂಪಲ್ ಹುಡುಗಿಯ ಪ್ರೇಮಕಥೆ.

___________________________________________________________________________________

“ಬೆಳಗೆದ್ದು ಒಂದು ಲೋಟ ಕಾಫಿ ಕುಡಿಯದಿದ್ದರೆ ತಲೆಯೇ ಓಡುವುದಿಲ್ಲ ನಿನಗೆ. ಅದನ್ನಾದರೂ ನೀನೇ ಮಾಡಿಕೊಳ್ಳುತ್ತೀಯ? ಅದೂ ಇಲ್ಲ. ನಾನು ಕಾಫಿ ಬೆರೆಸಿ ನಿನ್ನ ಮುಂದೆ ಹಿಡಿಯಬೇಕು. ಆದಷ್ಟು ಬೇಗ ನಿನಗೊಂದು ಮದುವೆ ಮಾಡಿಸಿ, ಕಳುಹಿಸಿಕೊಟ್ಟರೆ ಸಾಕಾಗಿದೆ; …

ಕನ್ನಡಿ

ದಟ್ಟವಾದ ಕಪ್ಪು ಕಾಡಿಗೆಯದು
ಶತಪ್ರಯತ್ನ ಮಾಡುತಲಿಹುದು
ಕಂಡರೂ ಕಾಣದಂತಿಹ ಅಶ್ರುಗಳ
ಆ ಕಣ್ರೆಪ್ಪೆಗಳಡಿ ಮರೆಮಾಚಿಡಲು

ಗಾಢ ಬಣ್ಣ ಮೆತ್ತಿದ ತುಟಿಯಂಚಿನಲಿ
ಅವಿತಿಹುದು  ನೋವಿನ ಛಾಯೆ
ಕೆಂಪು ಅಧರದಿ ಮೂಡಿಹ ಶುಷ್ಕ ನಗು
ಮಾಸಿಹುದು ಅಗಾಧ ವಿಷಾದವನು

ಮೊಗದ ತುಂಬಾ ತುಂಬಿದೆ ಥಳುಕು –
ಬಳುಕಿನ ಕೃತಕ ಸೌಂದರ್ಯ ವರ್ಧಕ
ಮೂರ್ತವೆತ್ತ ಗಾಂಭೀರ್ಯ ಬೇಕೆಂದರೂ
ವಿಷದ ಪಡಿಸಲಾರದ …

seebe

ನೆನಪಿನ ಬುತ್ತಿ – I – ಅಜ್ಜಿ ಮನೆ – ಭಾಗ – 4 – ಪೇರಳೆ

ನಿಮಗೆ ಪೇರಳೆ ಗೊತ್ತುಂಟಾ? ನೀವು ದಕ್ಷಿಣ ಕನ್ನಡದವರಾದರೆ ಗೊತ್ತಿರುತ್ತದೆ. ಹಾಗೆಯೇ ಅಲ್ಲಿಯವರಿಗೆ ೨ ರೀತಿಯ ಪೇರಳೆ ಗೊತ್ತಿರುತ್ತದೆ. ನನಗೆ ಅದು ಬಾಲ್ಯದ ಮಜದ ನೆನಪೂ ಸಹ ಹೌದು! ಗೊತ್ತಾಗದಿದ್ದರೆ ಮುಂದೆ ಓದಿ!

ಪೇರಳೆ ಅಂತ ನಾವು ಹೇಳುವುದು ಹೆಚ್ಚಾಗಿ ಸೀಬೆ ಹಣ್ಣಿಗೆ. ನಮ್ಮೂರಲ್ಲಿ ಎಲ್ಲರೂ ಸೀಬೆ ಕಾಯಿ / ಹಣ್ಣನ್ನು ಪೇರಳೆ ಎಂದೇ ಹೇಳುವುದು. ಪೇರಳೆಗೆ …

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 3

ಆಲೂಗಡ್ಡೆಯ ಸುತ್ತ…! 

ಮೊನ್ನೆ ಚೆನ್ನಾಗಿರುವ ಆಲೂಗಡ್ಡೆ ಆರಿಸಿ ತರಲು ಪಟ್ಟ ಅವಸ್ಥೆಯಲ್ಲಿ ಮತ್ತೆ ನಮ್ಮ ಮನೆಯ ಆಲೂಗಡ್ಡೆ ಸಾಂಬಾರ್ ನೆನಪಿಗೆ ಬಂತು. ಆಗೆಲ್ಲ ಮನೆಯಲ್ಲೇ ಬೆಳೆದ ತರಕಾರಿಗಳ ಅಡುಗೆಯದೇ ಕಾರುಬಾರು. ರುಚಿಯಾದ ಹೀರೆ, ಪಟಗಿಲ, ಬೆಂಡೆ, ತೊಂಡೆ, ಹಾಗಲ, ಹರಿವೆ, ಬಸಳೆ.. ಹೀಗೆ ಉದ್ದದ ಪಟ್ಟಿ ನೆನೆಸಿಕೊಂಡರೆ ಬಾಯಲ್ಲಿ ಈಗಲೂ ನೀರು ಬರುತ್ತದೆ!  ಆಗಿನ ರುಚಿ, …

tiruguva khurchi

ನೆನಪಿನ ಬುತ್ತಿ -II – ನಮ್ಮನೆ ಬಾಲ್ಯದ ಸವಿನೆನಪುಗಳು – ಭಾಗ – 2

ಅಣ್ಣ – ತಂಗಿ ಮತ್ತು ತಿರುಗುವ ಖುರ್ಚಿಯಲ್ಲಿನ ಸಾಮಾನ್ಯ ಜ್ಞಾನ !

ಅದೊಂದು ಭಾನುವಾರ. ಎಂದಿನಂತೆ ಸುಮಾರು 10:30 ರ ಅಂದಾಜು. ಅಜ್ಜ ಚಹಾ ಕುಡಿದು; ಸ್ಕೂಟರ್ ಹಿಡಿದು ಪೇಟೆಗೆ ಹೊರಡುತ್ತಲೇ ನನ್ನ ಸವಾರಿ ನಿಧಾನಕೆ ಅಜ್ಜನ ಓದಿನ ಕೋಣೆಗೆ ಹೊಕ್ಕಿತ್ತು. ಅಜ್ಜ ಇದ್ದಾಗ ಹೋಗುವುದು ಬೇರೆಯದೇ ಇತ್ತು. ಆದರೆ, ಅಜ್ಜ ಇಲ್ಲದಾಗ ಹೋಗಿ ಅಜ್ಜನ …

Enable Notification OK No thanks