ಮತ್ತೆ ಬಂದೀತೇ ಶ್ರಾವಣ ?

ಮುಂಗಾರಿನಲಿ ಎಲ್ಲೂ ಸಲ್ಲದ ಮೇಲೆ 
ಸುಮ್ಮನೇತಕೆ ಇಲ್ಲಿ ನೆಲೆ ನಿಲ್ಲುವೆ ?
ಸಾಲದೇ?, ಸೀದುಹೋದ ಕಾತುರತೆಗೆ
ಚಾತಕ ಪಕ್ಷಿಯಂತೆ ನೀ ತಳೆದ ನಿಲುವು ?

ಪರಿ – ಪರಿಯಾಗಿ ಬೇಡಿದರೂ ಸಹ ಸಿಗದ
ಕವಡೆ ಕಾಸಿನ ಕಿಮ್ಮತ್ತು ಸಾಕಾಗಲಿಲ್ಲವೇ ?
ನೀನೇ ಕಟ್ಟಿದ ಹಂಗಿನರಗಿನ ಅರಮನೆಯ ವಾಸ
ಪಕ್ಕನೆ ಮತ್ತೇನನ್ನಾದರೂ ನುಡಿಯಿತೇ ಶಕುನದ ಹಕ್ಕಿ ? …