ಮಳೆಯು ಮಾತನಾಡುತ್ತಿದೆ ..!
ತಂಗಾಳಿ ಬೀಸಿ ತಂದ ಇಂಪಾದ ಇಂಚರ
ಮುತ್ತಿನ ತೋರಣದ ರಮ್ಯ ಚಿತ್ರಾಲಂಕಾರ
ನದಿ-ವನಗಳ ನಡುವಿನ ಹನಿ ನೀರಿನ ಝಳ-ಝಳ
ಕೋಲ್ಮಿಂಚಿನ ಕಿರಣಗಳ ಮೀರಿಹ ಸ್ವಾತಿ ಮುತ್ತಿನ ಫಳ-ಫಳ !
ಸಾಲಂಕೃತ ಧರೆಯ ವಿಹಂಗಮ ಚಿತ್ರಣ
ತಣಿಸಿಹುದು ಭುವಿಯ ಭೀಕರ ತಲ್ಲಣ
ಸುಮಧುರ ದುಂಬಿಗಳ ನಾದ ಝೇಂಕಾರ
ಮುನಿಸ ತೋರಿಪ ವಿನೂತನ ಬಗೆಯ ಸಾಕಾರ!
ಪ್ರಕೃತಿ ಕರೆದೊಯ್ಯುವುದು ಒಡಲೊಳು ಬಹುದೂರ ತೀರ
ಮಾರ್ದನಿಸಲು ಕ್ಷಣ-ಕ್ಷಣಗಳ ಭಾವ ಸಾಕ್ಷಾತ್ಕಾರ
ಸ್ಪರ್ಶ ಸೊಂಪಾದ ತಂಗಾಳಿಯು ಬೀಸುತಲಿದೆ
ಮತ್ತೆ – ಮತ್ತೆ ಮಳೆಯು ಮಾತಾಡುತ್ತಿದೆ !
– ಸ್ಮಿತಾ ಆಲಂಗಾರ್ …