ಒಲವಿನ ಓಲೆ / Olavina Ole

ಒಲವಿನ ಓಲೆ

ನಿನ್ನೊಲವಿನ ವಿಸ್ಮಯದ ಜಗದಲಿ
ಅಕ್ಕರೆಯ ನಗೆಯ ಬಾಳಬಂಡಿಯಲಿ
ನೀ ಮರಳಿ ಮರುಕಳಿಸಿದ ಪ್ರೀತಿಯೊಳು
ನನ್ನೆದೆಯಲಿ ತುಂಬಿದೆ ನಿನ್ನೊಲವಿನ ಬಾಳು

ತನ್ಮಯಳಾದೆನು ನಾ ಈ ಬಣ್ಣದ ಚಿತ್ತಾರದಲಿ
ನಿನ್ನ ಕಂಗಳ ಕೊಳದಿ ತುಂಬಿಹ ಬೆಳಕಿನ ಕಿರಣದಲಿ
ಸದಾ ನಗೆಯಿರಲಿ ನಿನ್ನ ತುಟಿಯಂಚಿನಲಿ
ನಿನ್ನಾ ನಗೆ ಹೊಳೆಯುವುದು ನನ್ನೀ ಮುಂಗುರುಳಿನಲಿ

ಮುಸ್ಸಂಜೆಯ ತಿಳಿ ನೀಲಿ ಆಗಸದಿ ನೀನಿಟ್ಟ ದೀಪ
ಕಳೆದಿದೆ ಕತ್ತಲ ಅಕ್ಕರೆಯ ಸವಿಗಾನದಲಿ
ಇಬ್ಬನಿಯು ಮುತ್ತಿಕ್ಕಿದೆ ಹೂವಿನ ಗೊಂಚಲಲಿ
ಶರದ್ೃತುವಿನ ಆಗಮನವಾಗಿದೆ ನನ್ನ ಬಾಳಿನಲಿ

~ ಸ್ಮಿತಾ

5 Responses

Leave a Reply

Time limit is exhausted. Please reload CAPTCHA.